Job Description: * ಕೇಂದ್ರ ಕ್ರೀಡಾ ಸಚಿವಾಲಯವು ವಿಜೇತರಿಗೆ 2020 ರ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳ ಟ್ರೋಫಿಗಳನ್ನು ನೀಡಿತು, ವಿಜೇತರು ಈ ಮೊದಲೇ ನಗದು ಬಹುಮಾನಗಳನ್ನು ಸ್ವೀಕಾರ ಮಾಡಿದ್ದಾರೆ, ಆದರೆ ಕೋವಿಡ್-19 ಹಿನ್ನಲೆಯಿಂದಾಗಿ 2020 ರ ಸಮಾರಂಭದಲ್ಲಿ ಟ್ರೋಫಿಗಳುನ್ನು ಸ್ವೀಕರಿಸಲು ಆಗಿರಲಿಲ್ಲ. * ಕ್ರೀಡಾ ಸಚಿವಾಲಯವು 2020 ರ ಆಗಸ್ಟ್ 29 ರಂದು ಒಟ್ಟಾರೆ 74 ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ನೀಡಿದೆ, ಅವುಗಳಲ್ಲಿ 27 ಅರ್ಜುನ ಪ್ರಶಸ್ತಿಗಳು ಹಾಗೂ 5 ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗಳು ಸೇರಿವೆ. * 2020 ರ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ: ರೋಹಿತ್ ಶರ್ಮಾ (ಕ್ರಿಕೆಟ್), ಮನಿಕಾ ಬಾತ್ರಾ (ಟೇಬಲ್ ಟೆನಿಸ್) ಮರಿಯಪ್ಪನ್ ತಂಗವೇಲು (ಪ್ಯಾರಾ-ಅಥ್ಲೆಟಿಕ್ಸ್), ರಾಣಿ ರಾಂಪಾಲ್ (ಹಾಕಿ) ಮತ್ತು ವಿನೇಶ್ ಫೋಗಟ್ (ಕುಸ್ತಿ) ಇವರಿಗೆ ಲಭಿಸಿದೆ. * 2020ರ ಅರ್ಜುನ ಪ್ರಶಸ್ತಿ: ಅತಾನು ದಾಸ್ (ಆರ್ಚರಿ), ಚಿರಾಗ್ ಚಂದ್ರಶೇಖರ್ ಶೆಟ್ಟಿ (ಬ್ಯಾಡ್ಮಿಂಟನ್), ದ್ಯುತಿ ಚಂದ್ (ಅಥ್ಲೆಟಿಕ್ಸ್), ಇಶಾಂತ್ ಶರ್ಮಾ (ಕ್ರಿಕೆಟ್), ದೀಪ್ತಿ ಶರ್ಮಾ (ಕ್ರಿಕೆಟ್), ದಿವ್ಯಾ ಕಕ್ರಾನ್ (ಕುಸ್ತಿ ವಿಭಾಗ). * 2020 ರ ದ್ರೋಣಾಚಾರ್ಯ ಪ್ರಶಸ್ತಿ: ನರೇಶ್ ಕುಮಾರ್ (ಟೆನಿಸ್), ರೋಮೇಶ್ ಪಠಾನಿಯಾ (ಹಾಕಿ), ಧರ್ಮೇಂದ್ರ ತಿವಾರಿ (ಆರ್ಚರಿ), ಓಂ ಪ್ರಕಾಶ್ ದಹಿಯಾ (ಕುಸ್ತಿ ವಿಭಾಗ) * 2020 ರ ಧ್ಯಾನ್ ಚಂದ್ ಪ್ರಶಸ್ತಿ: ಕುಲದೀಪ್ ಸಿಂಗ್ ಭುಲ್ಲರ್ (ಅಥ್ಲೆಟಿಕ್ಸ್), ಲಾಖಾ ಸಿಂಗ್ (ಬಾಕ್ಸಿಂಗ್), ತೃಪ್ತಿ ಮುರ್ಗುಂಡೆ (ಬ್ಯಾಡ್ಮಿಂಟನ್), ಎನ್ ಉಷಾ (ಬಾಕ್ಸಿಂಗ್), ಮನ್ಪ್ರೀತ್ ಸಿಂಗ್ (ಕಬಡ್ಡಿ), ನಂದನ್ ಬಾಲ್ (ಟೆನಿಸ್). * ಪ್ರಸ್ತುತ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ಭಾರತದಲ್ಲಿನ 'ಆರು ಕ್ರೀಡಾ ಪ್ರಶಸ್ತಿಗಳ'ನ್ನು ನೀಡುತ್ತದೆ.