Job Description: * ಪ್ರಸ್ತುತ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಜಯಿಸಿರುವ ನೀರಜ್ ಚೋಪ್ರಾ ಅವರಿಗೆ IPL ನ ಚೆನ್ನೈ ಸೂಪರ್ ಕಿಂಗ್ಸ್ ತಂಡವು 1 ಕೋಟಿ ರೂ. ನೀಡಿ ಗೌರವಿಸಿದೆ. * ಚೆನ್ನೈ ಸೂಪರ್ ಕಿಂಗ್ಸ್ ತಂಡವು 8758 ಸಂಖ್ಯೆಯ ಜೆರ್ಸಿಯನ್ನು ನೀರಜ್ ಚೋಪ್ರಾ ಅವರಿಗೆ ನೀಡಿದೆ. * ನೀರಜ್ ಚೋಪ್ರಾ ಅವರು ಜಾವೆಲಿನ್'ನ್ನು 87.58 ಮೀ. ದೂರದಷ್ಟು ಎಸದಿದ್ದಾರೆ, ಈ ಕಾರಣಕ್ಕಾಗಿ ಈ ಸಂಖ್ಯೆಯ ಜೆರ್ಸಿಯನ್ನು ನೀಡಲಾಗಿದೆ ಎಂದು CSK ತಿಳಿಸಿದೆ. * ಈ ಮೊದಲು ಒಲಿಂಪಿಕ್ಸ್ನ ವೈಯಕ್ತಿಕ ವಿಭಾಗದಲ್ಲಿ ಅಭಿನವ ಬಿಂದ್ರಾ ಅವರು ಚಿನ್ನದ ಪದಕ ಜಯಿಸಿದ್ದರು, ಇದೀಗ ನೀರಜ್ ಚೋಪ್ರಾ ಅವರು ಕೂಡ ಈ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. * ಒಲಿಂಪಿಕ್ಸ್ನ ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕ ಪಡೆದಿರುವ ಭಾರತದ 2 ನೇ ಕ್ರೀಡಾಪಟು ಇವರಾಗಿದ್ದಾರೆ.