Job Description: * ಸದ್ಯ ತಾಲಿಬಾನ್ ಆಡಳಿತದಲ್ಲಿರುವ ಆಫ್ಘಾನಿಸ್ತಾನ್ ರಾಷ್ಟ್ರಕ್ಕೆ ಮಾನವೀಯತೆಯ ದೃಷ್ಟಿಯಿಂದ ಅಮೇರಿಕ 144 ಮಿಲಿಯನ್ ಡಾಲರ್ ನೆರವು ನೀಡುವದಾಗಿ ಘೋಷಿಸಿದೆ, ಎಂದು ಅಮೇರಿಕದ ಕಾರ್ಯದರ್ಶಿ ಟೋನಿ ಬ್ಲಿಂಕೇನ್ ಅವರು ತಿಳಿಸಿದ್ದಾರೆ. * ಪ್ರಸ್ತುತ ವಿಶ್ವಸಂಸ್ಥೆಯ ನಿರಾಶ್ರೀತರ ನಿಧಿ, ಹಾಗೂ ಅಮೇರಿಕ ಮಕ್ಕಳ ನಿಧಿ, ಅಂತರರಾಷ್ಟ್ರೀಯ ವಲಸಿಗರ ಅನುದಾನ, ಇದರ ಜೊತೆಗೆ ವಿಶ್ವ ಆರೋಗ್ಯ ಸಂಸ್ಥೆಯ ನೆರವನ್ನು ಕ್ರೋಢಿಕರಿಸಿ ನೆರವು ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ. * ಅಮೇರಿಕದ ಈ 144 ಮಿಲಿಯನ್ ಡಾಲರ್ ಆರ್ಥಿಕ ನೆರವಿನಿಂದಾಗಿ ಆಫ್ಘಾನಿಸ್ತಾನದಲ್ಲಿ ಸಿಲುಕಿಕೊಂಡಿರುವ 18 ದಶಲಕ್ಷ ಜನರಿಗೆ ಬಳಸಲಾಗುತ್ತದೆ ಎಂದು ತಿಳಿಸಿದ್ದಾರೆ. * ಒಟ್ಟಾರೆ 2021ರಲ್ಲಿ ಆಫ್ಘಾನಿಸ್ತಾನ ರಾಷ್ಟ್ರಕ್ಕೆ 474 ಮಿಲಿಯನ್ ಡಾಲರ್ ನೆರವು ನೀಡಲಾಗಿದೆ ಎಂದು ಅಮೇರಿಕದ ಕಾರ್ಯದರ್ಶಿ ಟೋನಿ ಬ್ಲಿಂಕೇನ್ ಅವರು ತಿಳಿಸಿದ್ದಾರೆ.