Job Description: * ಇತ್ತೀಚಿಗೆ ಪ್ರಧಾನಿ ಮೋದಿಯವರು ಉತ್ತರ ಪ್ರದೇಶದಲ್ಲಿನ 9 ಹೊಸ ವೈದ್ಯಕೀಯ ಕಾಲೇಜುಗಳನ್ನು ಉದ್ಘಾಟಿಸಿದರು, ಈ ಮೂಲಕ 2,500 ಹಾಸಿಗೆಗಳ ಆಸ್ಪತ್ರೆ ಗಳು ಆರಂಭವಾಗಲಿದ್ದು, ಜೊತೆಗೆ 5000 ಮಂದಿ ವೈದ್ಯಕೀಯ ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಗೆ ವೃತ್ತಿಪರ ತರಬೇತಿ ಸಿಗುಲಿದೆ ಎಂದು ಅವರು ತಿಳಿಸಿದರು. * ಉತ್ತರಪ್ರದೇಶದಲ್ಲಿ ಕೊರೊನಾ ಸಂದರ್ಭದಲ್ಲಿಯೂ ಸಾಕಷ್ಟು ಸಾಧನೆಗಳಾಗಿದ್ದು, ಉತ್ತರ ಪ್ರದೇಶದ ಪ್ರತಿಯೊಂದು ಜಿಲ್ಲೆಯಲ್ಲಿಯೂ ಕೊರೊನಾ ಆರೈಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಅಲ್ಲದೆ ಲಸಿಕೆ ನೀಡಿವಿಕೆಯಲ್ಲಿ ಭಾರತದ ಮಹತ್ವದ ಮೈಲುಗಲ್ಲು ಸಾಧಿಸಲು ಉತ್ತರಪ್ರದೇಶದ ಕೊಡುಗೆ ಬಹುದೊಡ್ಡ ಕಾಣಿಕೆ. ಹೊಸ ತಲೆಮಾರಿನ ವೈದ್ಯರು ಸಾಕಷ್ಟು ಪ್ರಮಾಣದಲ್ಲಿ ಈಗ ವೃತ್ತಿ ರಂಗ ಪ್ರವೇಶ ಮಾಡಿರುವುದರಿಂದ ದೇಶದ ಜನರ ಆರೋಗ್ಯ ಸುಧಾರಿಸುತ್ತದೆ ಎಂದು ತಿಳಿಸಿದ ಮೋದಿ ಮಾತೃಭಾಷೆಯಲ್ಲಿ ಶಿಕ್ಷಣ ಸಿಗುವಂತೆ ಆಗಬೇಕು ಎನ್ನುವುದು ನಮ್ಮ ಸರ್ಕಾರದ ನೀತಿ ಎಂದು ಈ ಸಂದರ್ಭದಲ್ಲಿ ಹೇಳಿದರು.