Job Description: * ಚೀನಾ ದೇಶವು 2021 ರ ಅಕ್ಟೋಬರ್. 23 ರಂದು ಹೊಸ ಶಿಕ್ಷಣ ಕಾನೂನನ್ನುಅಂಗೀಕರಿಸಿದೆ, ಮುಖ್ಯ ವಿಷಯಗಳಲ್ಲಿ ಹೋಮ್ವರ್ಕ್ ಮತ್ತು ಆಫ್-ಸೈಟ್ ಭೋದನೆಯ 'ಅವಳಿ ಒತ್ತಡಗಳನ್ನು' ಕಡಿಮೆಗೊಳಿಸುವ ಉದ್ದೇಶವನ್ನು ಹೊಂದಿದೆ. * ಆನ್ಲೈನ್ ಆಟಗಳಿಗೆ ಯುವಕರ ಚಟವನ್ನು ಎದುರಿಸುವುದು, ಆಧ್ಯಾತ್ಮಿಕ ಅಫೀಮಿನ ಒಂದು ರೂಪವೆಂದು ಗುರುತಿಸಲಾಗಿದೆ. * ಪ್ರಸ್ತುತ ಚೀನಾ 2021 ರ ಅಕ್ಟೋಬರ್. 18 ರಂದು ತಮ್ಮ ಚಿಕ್ಕ ಮಕ್ಕಳು, ಕೆಟ್ಟ ನಡವಳಿಕೆ ಅಥವಾ ಅಪರಾಧಗಳನ್ನು ತೋರಿದರೆ ಪೋಷಕರನ್ನು ಮಕ್ಕಳನ್ನು ಶಿಕ್ಷಿಸಲು ಈ ಶಾಸನವನ್ನು ಗುರುತಿಸಲಾಗುತ್ತದೆ ಎಂದು ಚೀನಾ ಸಂಸತ್ತು ತಿಳಿಸಿದೆ. * ಈ ಹೊಸ ಕಾನೂನನ್ನುಅಂಗೀಕರಿಸಿದ್ದರಿಂದ ಇದೀಗ ಸ್ಥಳೀಯ ಸರ್ಕಾರಗಳ ಜವಾಬ್ದಾರಿ ಹೆಚ್ಚಾಗಿದೆ, ಹಾಗೂ ಈ ಕಾನೂನು ಮಕ್ಕಳಲ್ಲಿ ಒತ್ತಡವನ್ನು ಕಡಿಮೆ ಮಾಡಲು ಹಾಗೂ ಅಂತರ್ಜಾಲದ ಅತಿಯಾದ ಬಳಕೆಯನ್ನು ತಪ್ಪಿಸಲು ಸಹಾಯಕಾರಿಯಾಗಲಿದೆ, ಅಷ್ಟೇ ಅಲ್ಲದೇ ಈ ಹೊಸ ಕಾನೂನು ಮನೆಕೆಲಸವನ್ನು ಕಡಿಮೆಗೊಳಿಸಿ ವಾರಾಂತ್ಯ ಮತ್ತು ರಜಾದಿನಗಳಲ್ಲಿ ಹಲವು ಪ್ರಮುಖ ವಿಷಯಗಳಿಗೆ ಶಾಲೆಯ ನಂತರ ಬೋಧನೆಯನ್ನು ನಿಷೇಧಿಸಲು ಸಹಾಯಕಾರಿ ಯಾಗಲಿದೆ ಎಂದಿದ್ದಾರೆ. * ಚೀನಾ ದೇಶದಲ್ಲಿ ಶಿಕ್ಷಣವನ್ನು ಪ್ರಾಥಮಿಕವಾಗಿ ಸರ್ಕಾರಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯಿಂದ ನಿರ್ವಹಿಸಲಾಗುತ್ತದೆ, ಚೀನಾದ ಈ ಕಾನೂನಿನ ಪ್ರಕಾರ, ದೇಶದ ಎಲ್ಲಾ ನಾಗರಿಕರು ಕನಿಷ್ಟ '9' ವರ್ಷಗಳವರೆಗೆ 'ಒಂಬತ್ತು ವರ್ಷದ ಕಡ್ಡಾಯ ಶಿಕ್ಷಣ' ಎಂದು ಕರೆಯುವ ಶಾಲೆಗೆ ಹಾಜರಾಗಬೇಕು, ಈ ಕಡ್ಡಾಯ ಶಿಕ್ಷಣಕ್ಕೆ ಸರ್ಕಾರವು ಹಣ ಭರಿಸಲಿದೆ ಎಂದು ತಿಳಿಸಿದ್ದಾರೆ.