Job Description: * ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಮೂರು ದಿನಗಳ ಇಸ್ರೇಲ್ ಭೇಟಿಯ ಸಮಯದಲ್ಲಿ ಇಸ್ರೇಲಿ ಕೌಂಟರ್'ನ ಅಂತಾರಾಷ್ಟ್ರೀಯ ಪ್ರಯಾಣದ ನಡುವೆ ಕೋವಿಡ್ -19 ಲಸಿಕೆ ಪ್ರಮಾಣಪತ್ರಗಳನ್ನು ಪರಸ್ಪರ ಗುರುತಿಸಲು ಒಪ್ಪಿಕೊಂಡಿದ್ದಾರೆ. * ಅಷ್ಟೇ ಅಲ್ಲದೇ ಜೈಶಂಕರ್ ಅವರು ಅಲ್ಲಿನ ಸರ್ಕಾರಿ ಅಧಿಕಾರಿಗಳು, ವ್ಯಾಪಾರ ಮುಖಂಡರು ಹಾಗೂ ಭಾರತೀಯ ಯಹೂದಿ ಸಮುದಾಯಗಳೊಂದಿಗೆ ಸಭೆ ನಡೆಸಿ, ನಂತರ ಇಸ್ರೇಲ್'ನ ವಿದೇಶಾಂಗ ಸಚಿವ ಯಾರ್ ಲ್ಯಾಪಿಡ್ ಅವರನ್ನು ಭೇಟಿಯಾದರು, ಈ ಭೇಟಿಯ ಸಂಧರ್ಭದಲ್ಲಿ ಕೋವಿಡ್-19 ಲಸಿಕೆಯ ಪ್ರಮಾಣೀಕರಣದ ಪರಸ್ಪರ ಗುರುತಿಸುವಿಕೆ ಮತ್ತು ಮುಂದಿನ ದಿನಗಳ ಮುಕ್ತ ವ್ಯಾಪಾರ ಒಪ್ಪಂದಗಳನ್ನು ಪುನರಾರಂಭಿಸಲು ಉಭಯ ಪಕ್ಷಗಳು ತಾತ್ವಿಕವಾಗಿ ಒಪ್ಪಿಕೊಂಡಿವೆ' ಎಂದು ತಿಳಿಸಿದ್ದಾರೆ. * ಪ್ರಸ್ತುತ 2022 ರ ನಡುವೆ ಭಾರತ ಮತ್ತು ಇಸ್ರೇಲ್ ಒಪ್ಪಂದದ ಸಹಿಗಾಗಿ ಸಿದ್ಧವಾಗಿವೆ ಎಂದು ತಿಳಿಸಿದ್ದಾರೆ, ಅಷ್ಟೇ ಅಲ್ಲದೇ ಆರೋಗ್ಯ ಕ್ಷೇತ್ರ, ಕೃಷಿ ಮತ್ತು ಹಸಿರು ಬೆಳವಣಿಗೆ ಆದ್ಯತೆಯನ್ನು ನೀಡಲಿದೆ ಎಂದಿದ್ದಾರೆ, ಹಾಗೂ ಕೋವಿಡ್-19 ಲಸಿಕೆ ಪ್ರಮಾಣಪತ್ರಗಳನ್ನು ಪರಸ್ಪರ ಗುರುತಿಸಲು ಹಂಗೇರಿ, ಸೆರ್ಬಿಯಾ ಭಾರತಕ್ಕೆ ಒಪ್ಪಿಗೆಯನ್ನು ನೀಡಿವೆ ಎಂದು ತಿಳಿದು ಬಂದಿದೆ.