Job Description: * ಪ್ರಸ್ತುತ ಅಮೇರಿಕದ ವಿಜ್ಞಾನಿ ಹಾಗೂ ಸಂಶೋಧಕರಾಗಿರುವ ಡೇವಿಡ್ ಜೂಲಿಯಸ್ ಹಾಗೂ ಆರ್ಡೆಮ್ ಪಟಪೂಟಿಯನ್ ಅವರಿಗೆ ಈ ಬಾರಿ ಜಂಟಿಯಾಗಿ 2021 ರ ವೈದ್ಯಕೀಯ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ನೊಬೆಲ್ ಸಮಿತಿಯು ಮಾಹಿತಿಯನ್ನು ನೀಡಿದೆ. * ಈ ಅಮೇರಿಕದ ವಿಜ್ಞಾನಿಗಳು ಚರ್ಮದಲ್ಲಿನ ಸ್ಪರ್ಶ ಹಾಗೂ ತಾಪಮಾನ ಗ್ರಾಹಕ ವ್ಯವಸ್ಥೆಯ ಬಗೆಗಿನ ಸಂಶೋಧನೆಗಳಿಗಾಗಿ ಇವರಿಗೆ ಈ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಸಮಿತಿ ತಿಳಿಸಿದೆ. * ಪ್ರತಿಷ್ಠಿತ ಈ ನೊಬೆಲ್ ಪ್ರಶಸ್ತಿಯು ಚಿನ್ನದ ಪದಕ ಹಾಗೂ 10 ಮಿಲಿಯನ್ ಸ್ವೀಡಿಷ್ ಕ್ರೋನರ್ ಅಂದರೆ 8.50 ಕೋಟಿ ರೂ. ಮೊತ್ತದ ಹಣವನ್ನು ಹೊಂದಿರುತ್ತದೆ.