Job Description: * ಪ್ರಧಾನಿ ಮೋದಿ ಅವರು ಈ ಹಿಂದೆ 2019 ರಲ್ಲಿ ಜಲಜೀವನ ಮಿಷನ್ಗೆ ಚಾಲನೆಯನ್ನು ನೀಡಿದ್ದರು, ಈ ಯೋಜನೆ ಅಡಿಯಲ್ಲಿ ಅಂದರೆ 2 ವರ್ಷಗಳಲ್ಲಿ 5 ಕೋಟಿ ಮನೆಗಳಿಗೆ ನೀರಿನ ಸಂಪರ್ಕವನ್ನು ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ. * ಸದ್ಯ ಸರಿ ಸುಮಾರು 1.25 ಲಕ್ಷ ಗ್ರಾಮಗಳ ಪ್ರತಿಯೊಂದು ಮನೆಯಲ್ಲಿಯೂ ಕೂಡ ಇದೀಗ ನಲ್ಲಿ ನೀರು ಲಭ್ಯವಾಗುತ್ತಿದೆ ಎಂದು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. * ಪ್ರಸ್ತುತ ಈ ಜಲಜೀವನ್ ಮಿಷನ್ ಎನ್ನುವುದು ಒಂದು ಗ್ರಾಮಕೇಂದ್ರಿತ ಯೋಜನೆಯಾಗಿದೆ, ಈ ಯೋಜನೆ ಅಡಿಯಲ್ಲಿ ಪ್ರತಿ ಗ್ರಾಮದ ಜನರಿಗೆ ನೀರು ಒದಗಿಸುವು ಗುರಿಯನ್ನು ಹೊಂದಿದೆ. * ಪ್ರಧಾನಿ ಮೋದಿ ಅವರು ಈ ಜಲಜೀವನ ಯೋಜನೆ ಕುರಿತು ಮಾಹಿತಿಯನ್ನು ಒದಗಿಸಲು ಜಲಜೀವನ ಮಿಷನ್ ಮೊಬೈಲ್ ಆಯಪ್ ನ್ನು ಬಿಡುಗಡೆ ಗೊಳಿಸಿದ್ದಾರೆ.