Job Description: * ಇತ್ತೀಚಿಗೆ ಮಹಿಳಾ ಹಕ್ಕುಗಳ ಹೋರಾಟಗಾರ್ತಿ, ಹಾಗೂ ಲೇಖಕಿಯಾಗಿರುವ ಕಮಲಾ ಭಾಸಿನ್ ಅವರು ತಮ್ಮ 75 ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ. * ಹೋರಾಟಗಾರ್ತಿ ಕಮಲಾ ಭಾಸಿನ್ ಅವರು 1946 ರಲ್ಲಿ ಪಂಜಾಬ್ನಲ್ಲಿ ಜನಸಿದ್ದಾರೆ, ಇವರು ಕಮಲಾ ಅವರು ಹಿಂದಿ ಹಾಗೂ ಇಂಗ್ಲಿಷ್ನಲ್ಲಿ ಲೇಖನ ಹಾಗೂ ಕವನಗಳನ್ನು ಬರೆಯುತ್ತಿದ್ದರು, ಅಷ್ಟೇ ಅಲ್ಲದೇ ಇವರು ಭಾರತ ಮತ್ತು ದಕ್ಷಿಣ ಏಷ್ಯಾ ದೇಶಗಳಲ್ಲಿ ಅತೀ ಹೆಚ್ಚಾಗಿ ಮಹಿಳಾ ಹಕ್ಕುಗಳ ಪರ ಹೋರಾಟಗಳಲ್ಲಿ ಭಾಗಿಯಾಗುತ್ತಿದ್ದರು. * ಲೇಖಕಿ ಕಮಲಾ ಭಾಸಿನ್ ಅವರು ನವದೆಹಲಿಯಲ್ಲಿ ವಾಸವಾಗಿದ್ದರು, ಇವರ ನಿಧನಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಂತಾಪವನ್ನು ಸೂಚಿಸಿದ್ದಾರೆ.