Job Description: * ಪ್ರಸ್ತುತ ದುಬೈನಲ್ಲಿ ನಡೆದ ಏಷ್ಯನ್ ಯೂತ್ ಮತ್ತು ಜೂನಿಯರ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಭಾರತಕ್ಕೆ ಒಟ್ಟಾರೆ 39 ಜಯಿಸಿದೆ, ಅದರಲ್ಲಿ 14 ಚಿನ್ನದ ಪದಕಗಳಿವೆ. * ಈ ಮೊದಲು ಆಡಿದ ಜೂನಿಯರ್ ಸ್ಪರ್ಧೆಯಲ್ಲಿ ಭಾರತಕ್ಕೆ '8' ಚಿನ್ನ, '5' ಬೆಳ್ಳಿ ಹಾಗೂ '6' ಕಂಚಿನ ಪದಕಗಳು ಸೇರಿ ಒಟ್ಟಾರೆ 19 ಪದಕಗಳನ್ನು ಜಯಿಸಿತ್ತು. * ಇದಲ್ಲದೇ ಯುವ ಬಾಕ್ಸರ್ಗಳು ಸ್ಪರ್ಧೆಯಲ್ಲಿ ಭಾರತದ ಪರವಾಗಿ '6' ಚಿನ್ನ, '9' ಬೆಳ್ಳಿ ಮತ್ತು '5' ಕಂಚು, ಒಟ್ಟಾರೆ 20 ಪದಕಗಳನ್ನು ಪಡೆದುಕೊಂಡಿದ್ದಾರೆ. * ನೇಹಾ ಅವರು ಯುವ ಮಹಿಳೆಯರ 54 ಕೆಜಿ ವಿಭಾಗದಲ್ಲಿ ಕಜಕಿಸ್ತಾನದ ಐಶಾಗುಲ್ ಏಳುಬಾಯೇವಾ ವಿರುದ್ಧ ಗೆದ್ದು ಭಾರತಕ್ಕೆ ಚಿನ್ನದ ಪದಕವನ್ನು ತಂದುಕೊಟ್ಟಿದ್ದಾರೆ. * ಭಾರತದ ಬಾಕ್ಸರ್ ಪ್ರೀತಿ ದಹಿಯಾ ಅವರು 2021 ರ ಏಷ್ಯನ್ ಯೂತ್ ಮತ್ತು ಜೂನಿಯರ್ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಚಾಂಪಿಯನ್ ಆಗಿ ಚಿನ್ನದ ಪದಕವನ್ನು ಜಯಿಸಿದ್ದಾರೆ. * ಇದೇ ಕ್ರೀಡಾಕೂಟದಲ್ಲಿ ಸ್ನೇಹಾ ಕುಮಾರಿ 66 ಕೆಜಿ ವಿಭಾಗದಲ್ಲಿ ಹಾಗೂ ಖುಷಿ 75 ಕೆಜಿ ವಿಭಾಗದಲ್ಲಿ ಚಿನ್ನದ ಪದಕಗಳನ್ನು ಜಯಿಸಿದ್ದಾರೆ.