Job Description: * ಜಪಾನ್ ದೇಶದ ಹಿರೋಷಿಮಾ ಮತ್ತು ನಾಗಸಾಕಿಯ ಮೇಲೆ ನಡೆದ ವಿಶ್ವದ ಮೊದಲ ಪರಮಾಣು ಬಾಂಬ್ ಸ್ಫೋಟದ 76 ನೇ ವಾರ್ಷಿಕೋತ್ಸವದ ನೆನಪಿಗಾಗಿ ಜಪಾನ್ ಪ್ರಧಾನಮಂತ್ರಿ ಯೋಶಿಹಿಡೆ ಸುಗಾ ಅವರು ಸ್ಮಾರಕಕ್ಕೆ ಉಪಸ್ಥಿತರಿದ್ದರು, ಹಾಗೂ ಈ ಸ್ಫೋಟದ ವಾರ್ಷಿಕೋತ್ಸವವನ್ನು ಒಂದು ನಿಮಿಷ ಮೌನವಾಗಿ ಆಚರಣೆ ಮಾಡಿದರು. * ಈ ಹಿಂದೆ 1945 ರ ಆಗಸ್ಟ್ 6 ಮತ್ತು ಆಗಸ್ಟ್ 9 ರಂದು ಯುನೈಟೆಡ್ ಸ್ಟೇಟ್ಸ್ '2' ಪರಮಾಣು ಬಾಂಬ್ ಸ್ಫೋಟಗಳನ್ನು ಜಪಾನ್ ದೇಶದ ನಗರಗಳಾಗಿರುವ ಹಿರೋಶಿಮಾ ಮತ್ತು ನಾಗಸಾಕಿ ಮೇಲೆ ಹಾಕಿತ್ತು, ಈ ಬಾಂಬ್ ಸ್ಫೋಟದಲ್ಲಿ ಸರಿ ಸುಮಾರು 129,000 ದಿಂದ 226,000 ಜನರನ್ನು ಪ್ರಾಣವನ್ನು ಬಿಟ್ಟರು. * ಯುನೈಟೆಡ್ ಸ್ಟೇಟ್ಸ್ ಸೇನಾಪಡೆಯ 1945 ರ ಜುಲೈ ತಿಂಗಳಿನಲ್ಲಿ ಪಾಟ್ಸ್ಡ್ಯಾಮ್ ಘೋಷಣೆ ಮಾಡಿ ಜಪಾನಿನ ಸಶಸ್ತ್ರ ಪಡೆಗಳ ಬೇಷರತ್ ಶರಣಾಗತಿಯಾಗಲು ಕರೆ ನೀಡಿದರು, ಆದರೆ ಜಪಾನ್ ದೇಶದ ಅಲ್ಟಿಮೇಟಮ್ ಇದನ್ನು ನಿರ್ಲಕ್ಷ ಮಾಡಿತ್ತು ಇದರಿಂದಾಗಿ ಈ ಬಾಂಬ ಸ್ಫೋಟ ನಡೆಯಿತು. * ವಿಶ್ವದ ಮೊದಲ ಪರಮಾಣು ಬಾಂಬ್'ನ್ನು 'ಲಿಟಲ್ ಬಾಯ್' ಎಂದು ಕರೆಯುತ್ತಿದ್ದರು. * ಯುನೈಟೆಡ್ ಸ್ಟೇಟ್ಸ್, ಜಪಾನ್ ದೇಶದ ನೈಋತ್ಯ ನಗರವಾಗಿರುವ ಹಿರೋಶಿಮಾ ಮೇಲೆ ಹಾಕಿತ್ತು ಆ ಸಮಯದಲ್ಲಿ ತಕ್ಷಣವೇ 80,000 ಜನರು ಬಲಿಯಾದರು. ಮತ್ತೇ ಆಗಸ್ಟ್. 9 ರಂದು ಯುನೈಟೆಡ್ ಸ್ಟೇಟ್ಸ್ 'ಫ್ಯಾಟ್ ಮ್ಯಾನ್' ಎಂಬ 2 ನೇ ಬಾಂಬ್ ನ್ನು ನಾಗಸಾಕಿಯ ಮೇಲೆ ಹಾಕಿತ್ತು ಆ ಸಮಯದಲ್ಲಿ 74,000 ಜನರು ಬಲಿಯಾದರು, ಈ ಬಾಂಬ್ ದಾಳಿಯ ಪರಿಣಾಮವಾಗಿ ಜಪಾನ್ ದೇಶ ಶರಣಾಗಿ 2ನೇ ಮಹಾಯುದ್ಧ ಕೊನೆಗೊಳಿಸಿತ್ತು.