Job Description: * ಈ ಬಾರಿಯ ಟೋಕಿಯೊ ಒಲಿಂಪಿಕ್ಸ್ನಲ್ಲಿ ಪಾಲ್ಗೊಳಲು ಭಾರತೀಯ ಮಹಿಳಾ ಈಜುಗಾರ್ತಿ ಮಾನಾ ಪಟೇಲ್ ಅರ್ಹತೆಯನ್ನು ಪಡೆದುಕೊಂಡಿದ್ದಾರೆ ಎಂದು ಸ್ವಿಮ್ಮಿಂಗ್ ಫೆಡರೇಶನ್ ಆಫ್ ಇಂಡಿಯಾ ಮಾಹಿತಿ ಪ್ರಕಟಿಸಿದೆ. * ಪ್ರಸ್ತುತ ಭಾರತೀಯ ಮಹಿಳಾ ಈಜುಗಾರ್ತಿ ಮಾನಾ ಪಟೇಲ್ ಅವರು ಟೋಕಿಯೋ ಒಲಿಂಪಿಕ್ಸ್'ನಲ್ಲಿ 100 ಮೀ. ಬ್ಯಾಕ್ಸ್ಟ್ರೋಕ್ನಲ್ಲಿ ಸ್ಪರ್ಧಿಸಲಿದ್ದಾರೆ, ಹಾಗೂ ಇವರು ಒಲಿಂಪಿಕ್ಸ್'ಗೆ ಅರ್ಹತೆ ಪಡೆದ ಭಾರತದ 3 ನೇ ಈಜುಗಾರ್ತಿಯಾಗಿದ್ದಾರೆ. * ಇತ್ತೀಚೆಗೆ ನಟರಾಜ್ ಹಾಗೂ ಪ್ರಕಾಶ್ ಅವರು ಒಲಿಂಪಿಕ್ ಕ್ವಾಲಿಫಿಕೇಷನ್ ಟೈಮಿಂಗ್ 'ಎ' ಮಟ್ಟವನ್ನು ಸಾಧಿಸಿ ಒಲಿಂಪಿಕ್ಸ್'ಗೆ ಅರ್ಹತೆ ಪಡೆದುಕೊಂಡಿದ್ದಾರೆ. * ದೇಶದಿಂದ ಒಬ್ಬ ಪುರುಷ ಹಾಗು ಒಬ್ಬ ಮಹಿಳಾ ಸ್ಪರ್ಧಿಯನ್ನು ಯುನಿವರ್ಸಲಿಟಿ ಕೋಟಾದ ಮೂಲಕ ಒಲಿಂಪಿಕ್ಸ್'ನಲ್ಲಿ ಸ್ಪರ್ಧಿಸಲು ಅವಕಾಶ ನೀಡುತ್ತದೆ.