Job Description: * ಪ್ರಸ್ತುತ ಭಾರತೀಯ ಅಮೆರಿಕನ್ ಕಿರಣ್ ಅಹುಜಾ ಅವರು ಅಮೆರಿಕದ 20 ಲಕ್ಷ ಸರ್ಕಾರಿ ನೌಕರರನ್ನು ನಿರ್ವಹಿಸುವ ಸರ್ಕಾರದ ಸಿಬ್ಬಂದಿ ನಿರ್ವಹಣಾ ಕಚೇರಿ (ಆಫೀಸ್ ಆಫ್ ಪರ್ಸನಲ್ ಮ್ಯಾನೇಜ್ಮೆಂಟ್ - OPM) ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ. * ಅಮೆರಿಕನ್ ಸೆನೆಟ್ನಲ್ಲಿ ನಡೆದ ಚುನಾವಣೆಯ ಟೈ- ಬ್ರೇಕಿಂಗ್ ( 50-50 ಮತಗಳು) ಹಂತ ತಲುಪಿತು ಆ ಸಮಯದಲ್ಲಿ ಅಮೇರಿಕದ ಉಪಾಧ್ಯಕ್ಷೆಯಾಗಿರುವ ಕಮಲಾ ಹ್ಯಾರಿಸ್ ರವರು ಮತ ಚಲಾಯಿಸಿ ಕಿರಣ್ ಅಹುಜಾ ಅವರನ್ನು ಆಯ್ಕೆ ಮಾಡಿದರು. * ಅಹುಜಾ ಅವರು ಬರಾಕ್ ಒಬಾಮ ಅಧ್ಯಕ್ಷರಾಗಿದ್ದಾಗ OPM ವಿಭಾಗದಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ್ದರು, ಇದಲ್ಲದೇ 2 ದಶಕಗಳ ಕಾಲ ಸಾರ್ವಜನಿಕ ಕಾರ್ಯಗಳಲ್ಲಿ ಸೇವೆ ಸಲ್ಲಿಸಿದ್ದಾರೆ.