Job Description: ಇತ್ತೀಚಿಗೆ ವಿಶ್ವಸಂಸ್ಥೆಯ UN Conference on Trade and Development (UNCTAD) ತನ್ನ "ವಿಶ್ವ ಹೂಡಿಕೆ ವರದಿ 2021" ಅನ್ನು ಬಿಡುಗಡೆಗೊಳಿಸಿದ್ದು, ಈ ವರದಿ ಪ್ರಕಾರ ಭಾರತವು 2020ರಲ್ಲಿ 64 ಬಿಲಿಯನ್ ಡಾಲರ್ ವಿದೇಶಿ ನೇರ ಹೂಡಿಕೆಗಳನ್ನು (ಎಫ್ಡಿಐ) ಪಡೆದುಕೊಂಡಿದೆ. ಈ ಮೂಲಕ ವಿಶ್ವದ FDI ಒಳಹರಿವಿನ ಐದನೇ ಅತಿದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಿದೆ. * 2020ರಲ್ಲಿ ಭಾರತದಲ್ಲಿ ಎಫ್ಡಿಐ ಶೇಕಡಾ 27 ರಷ್ಟು ಏರಿಕೆಯಾಗಿ 64 ಬಿಲಿಯನ್ ಡಾಲರ್ಗೆ ತಲುಪಿದೆ. FDI (ವಿದೇಶಿ ನೇರ ಹೂಡಿಕೆ) : ಒಂದು ಕಂಪನಿಯು ಮತ್ತೊಂದು ದೇಶದಲ್ಲಿನ ವ್ಯಾಪಾರ ಘಟಕದಲ್ಲಿ ಮಾಲೀಕತ್ವವನ್ನು ಪಡೆಯುವ/ನಿಯಂತ್ರಿಸುವ ಸಲುವಾಗಿ ಮಾಡುವ ಹೂಡಿಕೆಯನ್ನು ಸಾಮಾನ್ಯವಾಗಿ ವಿದೇಶಿ ನೇರ ಹೂಡಿಕೆ (ಎಫ್ಡಿಐ) ಎನ್ನಬಹುದು.