Job Description: * 2020 ಮಿಲೇನಿಯಮ್ ಟೆಕ್ನಾಲಜಿ ಬಹುಮಾನ ವಿಜೇತರನ್ನಾಗಿ ಕೇಂಬ್ರಿಡ್ಜ್ ಯೂನಿವರ್ಸಿಟಿಯ ರಸಾಯನಶಾಸ್ತ್ರಜ್ಞ ಶಂಕರ್ ಬಾಲಸುಬ್ರಮಣಿಯನ್ ಮತ್ತು ಡೇವಿಡ್ ಕ್ಲೆನರ್ಮನ್ ಅವರನ್ನು ಘೋಷಿಸಲಾಗಿದೆ, ಇದು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಪ್ರತಿಷ್ಠಿತ ಜಾಗತಿಕ ಬಹುಮಾನ ಇದಾಗಿದೆ, ಈ ವಿಜ್ಞಾನಿಗಳು ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕ್ರಾಂತಿಕಾರಿ ಡಿಎನ್ಎ ಸೀಖ್ವೆನ್ಸಿಂಗ್ ಟೆಕ್ನೀಕ್ 'ಎನ್ಜಿಎಸ್'ಗೆ ಈ 2020 ಮಿಲೇನಿಯಮ್ ಟೆಕ್ನಾಲಜಿ ಬಹುಮಾನವನ್ನು ನೀಡಲಾಗಿದೆ. * ಈ ಕ್ರಾಂತಿಕಾರಿ ಡಿಎನ್ಎ ಸೀಖ್ವೆನ್ಸಿಂಗ್ ಟೆಕ್ನೀಕ್ ಕರೊನಾ ವೈರಸ್ ತರಹದ ಮಾರಕ ರೋಗಗಳನ್ನು ಹರಡುವ ಜೀವಿಗಳ ಪತ್ತೆ ಹಚ್ಚುವಲ್ಲಿ ಹಾಗೂ ತಡೆಯಲ್ಲಿ ಈ ತಂತ್ರಜ್ಞಾನವು ಬಹಳ ಅನುಕೂಲಕರವಾಗಿದೆ ಎಂದು ತಿಳಿದು ಬಂದಿದೆ. * ಈ ತಂತ್ರಜ್ಞಾನವು ಕಡಿಮೆ-ವೆಚ್ಚದ ಮತ್ತು ದೊಡ್ಡ-ಪ್ರಮಾಣದ ಜೀನೋಮ್ ಸೀಖ್ವೆನ್ಸಿಂಗ್ ಮಾಡಲು ಸಹಾಯಕಾರಿಯಾಗಿದೆ, ಹಾಗೂ ಇದುನ್ನು ಪ್ರಸ್ತುತ ಕರೊನಾ ವೈರಸ್ನ ರೂಪಾಂತರಗಳನ್ನು ಪತ್ತೆ ಹಚ್ಚಲು ಬಳಸುತ್ತಿದ್ದಾರೆ. * ಇತ್ತೀಚಿಗೆ ನಡೆದ ವರ್ಚುವಲ್ ಕಾರ್ಯಕ್ರಮದಲ್ಲಿ ಫಿನ್ಲ್ಯಾಂಡ್ ರಿಪಬ್ಲಿಕ್ನ ಅಧ್ಯಕ್ಷ ಸೌಲಿ ನೀನಿಸ್ಟೊ ಅವರು ಈ ಬಹುಮಾನವನ್ನು ನೀಡಿದರು, ಪ್ರಸ್ತುತ ಈ ಮಿಲೇನಿಯಮ್ ಟೆಕ್ನಾಲಜಿ ಬಹುಮಾನವನ್ನು ಟೆಕ್ನಾಲಜಿ ಅಕಾಡೆಮಿ ಫಿನ್ಲ್ಯಾಂಡ್ 2004 ರಿಂದ ನೀಡುತ್ತಿದೆ ಮತ್ತು ಇದನ್ನು ಸಮಾಜ ಸೇವೆಗೆ ನೀಡಿರುವ ಉತ್ತಮವಾದ ಕೊಡುಗೆ ನೀಡುವ ಕ್ರಾಂತಿಕಾರಿ ಅನ್ವೇಷಣೆಗಳಿಗಾಗಿ ಪ್ರತಿ 2 ವರ್ಷಕ್ಕೊಮ್ಮೆ ನೀಡಲಾಗುತ್ತದೆ, ಈ ಬಹುಮಾನವು ಸುಮಾರು 1 ಮಿಲಿಯನ್ ಯೂರೋಗಳ ಮೌಲ್ಯ ಹೊಂದಿದೆ.