Job Description: * 2002ರಿಂದ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕವನ್ನು ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ ಪ್ರಕಟಿಸುತ್ತ ಬಂದಿದೆ. * ಪ್ರತಿ ದೇಶದಲ್ಲಿ ಪತ್ರಕರ್ತರು, ಸುದ್ದಿ ಸಂಸ್ಥೆಗಳು ಮತ್ತು ನೆಟಿಜನ್ಗಳು ಹೊಂದಿರುವ ಸ್ವಾತಂತ್ರ್ಯದ ಮಟ್ಟವನ್ನು ಮತ್ತು ಈ ಸ್ವಾತಂತ್ರ್ಯವನ್ನು ಗೌರವಿಸಲು ಅಧಿಕಾರಿಗಳು ಮಾಡಿದ ಪ್ರಯತ್ನಗಳನ್ನು ಇದು ತೋರಿಸುತ್ತಿದೆ. * ಪ್ರಸ್ತುತ ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ ಎಂಬ ಅಂತರಾಷ್ಟ್ರೀಯ ಸಂಸ್ಥೆ 180 ದೇಶಗಳ ಜಾಗತಿಕ ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕವನ್ನು ಬಿಡುಗಡೆಗೊಳಿಸಿದ್ದು, ಇದರಲ್ಲಿ ಭಾರತವು 142ನೇ ಸ್ಥಾನ ಪಡೆದುಕೊಂಡಿದೆ. * ಚೀನಾ 177ನೇ ಸ್ಥಾನ * ನೇಪಾಳ 106ನೇ ಸ್ಥಾನ * ಶ್ರೀಲಂಕಾ 127ನೇ ಸ್ಥಾನ * ಪಾಕಿಸ್ತಾನ 145 ಸ್ಥಾನ * ಬಾಂಗ್ಲಾದೇಶ 152ನೇ ಸ್ಥಾನದಲ್ಲಿದೆ. * ಭಾರತದಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಸರಕಾರ ಪುನಃ ಆಯ್ಕೆಯಾದ ನಂತರ ಮಾಧ್ಯಮಗಳ ಮೇಲಿನ ಒತ್ತಡ ಇನ್ನಷ್ಟು ಹೆಚ್ಚಾಗಿದೆ ಎಂದು ವರದಿ ಮೂಲಕ ತಿಳಿದಿದೆ. * ಪ್ರಸ್ತುತ ಕಾಶ್ಮೀರದ ಸ್ಥಿತಿ ಆತಂಕಕಾರಿಯಾಗಿದೆ, ಅಲ್ಲಿನ ಪತ್ರಕರ್ತರಿಗೆ ಆಗಾಗ ಪೊಲೀಸರು ಮತ್ತು ಸೇನಾ ಪಡೆಗಳಿಂದ ಕಿರುಕುಳವಾಗುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. * ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ ಪ್ರಕಟಿಸಿರುವ ಪತ್ರಿಕಾ ಸೂಚ್ಯಂಕದಲ್ಲಿ ನಾರ್ವೇ ಅಗ್ರ ಸ್ಥಾನದಲ್ಲಿದ್ದು ನಂತರದ ಸ್ಥಾನಗಳಲ್ಲಿ ಫಿನ್ಲ್ಯಾಂಡ್ ಹಾಗೂ ಡೆನ್ಮಾರ್ಕ್ ದೇಶಗಳಿವೆ. * 2021ರಲ್ಲಿನ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಅತೀ ಕಡಿಮೆ ಸ್ಥಾನ ಪಡೆದ ದೇಶಗಳು ಇಂತಿವೆ ಎರಿಟ್ರಿಯಾ, ಉತ್ತರ ಕೊರಿಯಾ, ತುರ್ಕಮೆನಿಸ್ತಾನ್, ಚೀನಾ, ಜಿಬೌಟಿ, ವಿಯೆಟ್ನಾಂ, ಇರಾನ್, ಸಿರಿಯಾ, ಲಾವೋಸ್ ಮತ್ತು ಕ್ಯೂಬಾ ದೇಶಗಳಾಗಿವೆ.