Job Description: * ಭಾರತ ತಂಡದ ಮಾಜಿ ವೇಗದ ಬೌಲರ್ ಮತ್ತು ಕರ್ನಾಟಕ ತಂಡದ ಮಾಜಿ ನಾಯಕ ಆರ್.ವಿನಯ್ಕುಮಾರ್ ಇದೀಗ ಎಲ್ಲ ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. * ಆರ್.ವಿನಯ್ಕುಮಾರ್ ಅವರು ದಾವಣಗೆರೆ ಎಕ್ಸ್ಪ್ರೆಸ್ ಎಂಬ ಖ್ಯಾತಿ ಪಡೆದಿದ್ದರು ಕಳೆದ 25 ವರ್ಷಗಳ ಕ್ರಿಕೆಟ್ ಪಯಣಕ್ಕೆ ಟ್ವಿಟರ್ ಮೂಲಕ ವಿದಾಯ ತಿಳಿಸಿದ್ದಾರೆ. ವಿನಯ ಕುಮಾರ್ ರವರು ಕ್ರಿಕೆಟ್ ಪಯಣ: * ಕರ್ನಾಟಕ ತಂಡವು ವಿನಯ್ ಕುಮಾರ್ ನಾಯಕತ್ವದಲ್ಲಿ 2013-14 ಹಾಗೂ 2014-15ನೇ ಸಾಲಿನಲ್ಲಿ ಹ್ಯಾಟ್ರಿಕ್ ಪ್ರಶಸ್ತಿ ಜಯಿಸಿತ್ತು. * ವಿನಯ್ ಕುಮಾರ್ ನಾಯಕತ್ವದಲ್ಲಿ ಕರ್ನಾಟಕ ತಂಡವು ಪ್ರತಿಷ್ಠಿತ ರಣಜಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ, ಇರಾನಿ ಕಪ್ ಜಯಿಸಿದ್ದರು, ಇವರು ದೇಶೀಯ ಕ್ರಿಕೆಟ್ನಲ್ಲಿ ಈ ಸಾಧನೆ ಮಾಡಿದ ಮೊದಲ ನಾಯಕ ಎನಿಸಿಕೊಂಡಿದ್ದಾರೆ. * 100ನೇ ರಣಜಿ ಪಂದ್ಯವನ್ನು ಕರ್ನಾಟಕ ತಂಡದ ಪರ ಆಟವಾಡಿದ್ದರು. * ಕ್ರಿಕೆಟರ್ ವಿನಯ್ ಕುಮಾರ್ ರವರು 2019ರಲ್ಲಿ ಪುದುಚೇರಿಗೆ ವಲಸೆ ಹೋಗಿದ್ದರು. * ಕರ್ನಾಟಕ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಾಯಕ ಎನಿಸಿಕೊಂಡಿದ್ದರು. * ರಾಷ್ಟ್ರೀಯ ತಂಡದ ಪರ ಏಕೈಕ ಟೆಸ್ಟ್ ಆಡಿ , 31 ಏಕದಿನ ಹಾಗೂ 9 ಟಿ20 ಪಂದ್ಯಗಳಲ್ಲಿ ಆಟವಾಡಿದ್ದಾರೆ, ಮತ್ತು ಐಪಿಎಲ್(IPL) ಹಾಗೂ KPL (ಕರ್ನಾಟಕ ಪ್ರೀಮಿಯರ್ ಲೀಗ್)ನಲ್ಲಿ ಕೂಡ ಆಟವಾಡಿದ್ದಾರೆ.