Job Description: * ಸಕಾಲ ಮಿಷನ್ ಯೋಜನೆಯಡಿ 'ಜನಸೇವಕ' ಕಾರ್ಯಕ್ರಮಕ್ಕೆ ಯಶವಂತಪುರ ವಿಧಾನಸಭಾ ಕ್ಷೇತ್ರದ ಉಳ್ಳಾಲ ವಾರ್ಡ್ನಲ್ಲಿ ಸಚಿವ ಎಸ್. ಸುರೇಶ್ ಕುಮಾರ್, ಸಾರ್ವಜನಿಕರ ಮನೆ ಬಾಗಿಲಿಗೆ ಸರ್ಕಾರಿ ಸೇವೆಗಳ ಯೋಜನೆಗೆ ಚಾಲನೆ ನೀಡಿದರು. * ಈ ಜನಸೇವಕ ಯೋಜನೆಯನ್ನು ರಾಜಧಾನಿಯ (ಬೆಂಗಳೂರಿನ)ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಜನಸೇವಕ ಯೋಜನೆಯು ರಾಜಾಜಿನಗರ, ಮಹದೇವಪುರ, ಬೊಮ್ಮನಹಳ್ಳಿ, ದಾಸರಹಳ್ಳಿ, ಯಶವಂತಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಜಾರಿಗೆ ತರಲಾಗಿದೆ, ಮುಂದಿನ ದಿನಗಳಲ್ಲಿ ರಾಜ್ಯದ ಇತರೆ ಪ್ರದೇಶಗಳಲ್ಲಿ ಜಾರಿಗೆತರಲು ಸರ್ಕಾರ ಮುಂದಾಗುವದು ಎಂದು ತಿಳಿಸಿದ್ದಾರೆ. ಜನಸೇವಕ ಯೋಜನೆಯ ಲಾಭಗಳು: ಆಧಾರ್ ಕಾರ್ಡ್, ಜಾತಿ - ಆದಾಯ ಪ್ರಮಾಣ ಪತ್ರ, ಅಂಗವಿಕಲ, ವಿಧವಾ ಪಿಂಚಣಿ, ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಯೋಜನೆ ಹಾಗೂ ಕಂದಾಯ ಇಲಾಖೆಯ 21 ಸೇವೆಗಳು, ಕರ್ನಾಟಕ ಕಟ್ಟಡ ಮತ್ತು ಕಾರ್ಮಿಕ ಕಲ್ಯಾಣ ಮಂಡಳಿ ಸೇವೆಗಳು, ಬಿಬಿಎಂಪಿ ವ್ಯಾಪ್ತಿಯ 18 ಸೇವೆಗಳು ಈ ಯೋಜನೆಯಲ್ಲಿ ಸಿಗಲಿವೆ.