Job Description: * ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಬೆಂಗಳೂರಿನಲ್ಲಿ 'ಭಾಷಾ ಭಾರತ - ಬಲಿಷ್ಠ ಭಾರತ' ಎನ್ನುವ 2 ದಿನಗಳ ದುಂಡು ಮೇಜಿನ ಸಭೆಯನ್ನು ನಡೆಸಿತು. ಈ ಕಾರ್ಯಕ್ರಮವನ್ನು ಕೇಂದ್ರ ರಾಸಾಯನಿಕ ಮತ್ತು ಗೊಬ್ಬರ ಖಾತೆಯ ಸಚಿವರಾಗಿರುವ ಡಿ. ವಿ.ಸದಾನಂದಗೌಡರು ವಿಡಿಯೋ ಕಾನಫರನ್ಸ್ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ದುಂಡು ಮೇಜಿನ ಸಭೆಯ ವಿವರ: * 'ಭಾಷಾ ಭಾರತ - ಬಲಿಷ್ಠ ಭಾರತ' ಎಂಬ ಎರಡು ದಿನಗಳ ರಾಷ್ಟ್ರೀಯ ದುಂಡು ಮೇಜಿನ ಸಭೆಯನ್ನು, ಭಾಷಾ ಸಮಾನತೆ ಮತ್ತು ಹಕ್ಕುಗಳು ಸಂಸ್ಥೆಯೊಂದಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಆಯೋಜಿಸಿ ಕಾರ್ಯಕ್ರಮವನ್ನು ನೆಡಸಿದೆ. * ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ. ಎಸ್. ನಾಗಾಭರಣರವರು ದುಂಡು ಮೇಜಿನ ಸಭೆಯ ಅಧ್ಯಕ್ಷತೆ ವಹಿಸಿಕೊಂಡು ಚಾಲನೆ ನೀಡಿದರು. * ಈ ದುಂಡು ಮೇಜಿನ ಸಭೆಯಲ್ಲಿ ದೇಶದ ಬೇರೆ ಬೇರೆ ರಾಜ್ಯಗಳ ಭಾಷೆಗಳ 17 ಪ್ರತಿನಿಧಿಗಳು ಭಾಗವಹಿಸಿದ್ದರು. * ಭಾರತ ದೇಶವು ಸ್ವಾತಂತ್ರ್ಯಾ ನಂತರ 1956 ರಲ್ಲಿ ಭಾಷಾಧಾರಿತವಾಗಿ ರಾಜ್ಯಗಳನ್ನು ವಿಂಗಡಿಸಿದೆ. * ಭಾರತದ ಸಂವಿಧಾನದ 8ನೇ ಅನುಸೂಚಿಯಲ್ಲಿ ಪಟ್ಟಿ ಮಾಡಲಾದ ಭಾಷೆಗಳಿಗೆ ಸಮಾನ ಸ್ಥಾನಮಾನ ನೀಡಬೇಕು, ಇಲದಿದ್ದರೆ ದೇಶದ ಗೌರವಕ್ಕೆ ಧಕ್ಕೆ ತರುವಂತಿದೆ ಎಂದು ಈ ಸಭೆಯಲ್ಲಿ ಹೇಳಲಾಗಿದೆ. ಈ ದುಂಡು ಮೇಜಿನ ಸಭೆಯಲ್ಲಿ ಈ ಹಲವು ವಿಷಯಗಳನ್ನು ಚರ್ಚೆಮಾಡಲಾಗಿದೆ. * ಭಾರತದ ಸಂವಿಧಾನದ 8ನೇ ಅನುಸೂಚಿಯಲ್ಲಿ ಪಟ್ಟಿ ಮಾಡಿರುವ ಎಲ್ಲಾ ಭಾಷೆಗಳಿಗೂ ಸಮಾನ ಸ್ಥಾನಮಾನ ಮತ್ತು ಗೌರವ ಒದಗಿಸಿಕೊಡುವದು. * ಭಾರತೀಯ ಸಂವಿಧಾನಕ್ಕೆ ಅಗತ್ಯವಿರುವ ತಿದ್ದುಪಡಿಗಳನ್ನು ಜಾರಿ ತರುವದು. * ಒಕ್ಕೂಟದಲ್ಲಿನ ರಾಜ್ಯಗಳು ತಮ್ಮ ಆಡಳಿತ ಭಾಷೆಗಳನ್ನಷ್ಟೇ ಅಲ್ಲದೆ ರಾಜ್ಯದ ಉಳಿದ ಸ್ಥಳೀಯ ಭಾಷೆಗಳಿಗೂ ಮಾನ್ಯತೆ ಮತ್ತು ಸಮಾನ ಸ್ಥಾನಮಾನ ನೀಡಬೇಕು, ಈ ವಿಷಯಗಳ ಚರ್ಚೆಯನ್ನು ಮಾಡಲಾಯಿತು.