Job Description: * ಭಾರತೀಯ ಸೇನೆಯ ಟ್ಯಾಂಕರ್ಗಳಿಗೆ ರಾತ್ರಿ ಕಾರ್ಯಾಚರಣೆಗೆ ಅನುಕೂಲವಾಗಲೆಂದು, ಬೆಂಗಳೂರಿನ ‘ಟಾಂಬೊ ಇಮೇಜಿಂಗ್’ ನವೋದ್ಯಮ ಸಂಸ್ಥೆ "ವೂಲ್ಫ್ ಪ್ಯಾಕ್"ಅನ್ನು ನೀಡಿದೆ. * ಈ ವೂಲ್ಫ್ಪ್ಯಾಕ್ ‘ಥರ್ಮಲ್ ಇಮೇಜಿಂಗ್ ತಂತ್ರಜ್ಞಾನದ ಆಧಾರದಲ್ಲಿ ಕಾರ್ಯನಿರ್ವಹಿಸುತ್ತದೆ ಜೊತೆಗೆ ಇದು ರಾತ್ರಿ ಸಮಯದಲ್ಲಿ 500 ಮೀ. ದೂರದಲ್ಲಿರುವ ಸೈನಿಕರನ್ನು ಮತ್ತು 2 ಕಿ.ಮೀ ದೂರದಲ್ಲಿರುವ ಟ್ಯಾಂಕರ್ಗಳನ್ನು ಪತ್ತೆ ಹಚ್ಚುತ್ತದೆ, ಹಾಗೂ ಟ್ಯಾಂಕರ್ ಒಳಗೆ ಇರುವಂತಹ ಯೋಧರು 360 ಡಿಗ್ರಿ ತಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯುತ್ತಿರುವ ಕಾರ್ಯ ವೈಖರಿಗಳನ್ನು ವೀಕ್ಷಣೆ ಮಾಡಲು ಸಹಾಯ ಮಾಡುತ್ತದೆ ಎಂದು ತಿಳಿಸಿದೆ.