Job Description: * ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗೆ (NDRF) ಇದೆ ಮೊದಲ ಬಾರಿ ಮಹಿಳಾ ತಂಡವನ್ನು ಸೇರ್ಪಡೆಮಾಡಲಾಗಿದೆ, ಈ ತಂಡದಲ್ಲಿ ಸುಮಾರು 100ಕ್ಕೂ ಹೆಚ್ಚು ಮಹಿಳಾ ಸಿಬ್ಬಂದಿಗಳು ಕಾರ್ಯನಿರ್ವಹಿಸಲಿದ್ದಾರೆ. * ಮೊದಲ NDRF ಮಹಿಳಾ ತಂಡವನ್ನು ಇತೀಚಿಗೆ ಉತ್ತರ ಪ್ರದೇಶದ ಘರ್ ಮುಕ್ತೇಶ್ವರ ಪಟ್ಟಣದಲ್ಲಿ ಕರ್ತವ್ಯದ ಮೇರೆಗೆ ಕಾರ್ಯ ನಿರ್ವಹಿಸಲು ನಿಯೋಜನೆಮಾಡಲಾಗಿತ್ತು, ಇಲ್ಲಿ ಈ ತಂಡ ಸಮರ್ಥವಾಗಿ ಕಾರ್ಯನಿರ್ವಹಿಸಿದೆ, ಎಂದು NDRFನ ನಿರ್ದೇಶಕ ಜನರಲ್ ಎಸ್.ಎನ್. ಪ್ರಧಾನ್ ಅವರು ಮಾಹಿತಿಯನ್ನು ನೀಡಿದ್ದಾರೆ.