Job Description: * ಅಸ್ಸಾಂ ರಾಜ್ಯವು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹವನ್ನು ನೀಡಲು ಹೊಸ ಯೋಜನೆಯನ್ನು ರೂಪಿಸಿದೆ. ಈ ಯೋಜನೆಯಿಂದ ಶಾಲೆಗೆ ಹೋಗುವ ಪ್ರತಿ ವಿದ್ಯಾರ್ಥಿನಿಯರಿಗೆ ಪ್ರತಿದಿನ 100 ರೂ. ಪ್ರೋತ್ಸಾಹ ಧನ ನೀಡುವದಾಗಿ ಅಸ್ಸಾಂ ರಾಜ್ಯ ಸರ್ಕಾರವು ನೂತನ ಯೋಜನೆಯನ್ನು ರೊಪಿಸಿದೆ ಎಂದು ಅಸ್ಸಾಂ ರಾಜ್ಯದ ಶಿಕ್ಷಣ ಸಚಿವರಾದ ಹಿಮಂತ್ ಬಿಸ್ವ ಶರ್ಮಾ ಅವರು ಮಾಹಿತಿಯನ್ನು ನೀಡಿದ್ದಾರೆ. * ಅಸ್ಸಾಂ ಸರ್ಕಾರವು ಪ್ರಗ್ಯಾನ್ ಭಾರತ ಯೋಜನೆ ಅಡಿಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರು ಪ್ರಥಮ ದರ್ಜೆಯಲ್ಲಿ ತೇರ್ಗಡೆಹೊಂದಿದವರಿಗೆ ಸ್ಕೂಟರ್ ನೀಡಲಾಗುತ್ತದೆ, ಇದರ ಜೊತೆಯಲ್ಲಿ ಪದವಿ ವಿದ್ಯಾರ್ಥಿಗಳಿಗೆ1500 ರೂ. ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ 2000 ರೂ. ಗಳನ್ನೂ ಪಠ್ಯಪುಸ್ತಕ ಖರೀದಿಸಲು ಅಸ್ಸಾಂ ಸರ್ಕಾರವು ಹಣ ನೀಡುತ್ತದೆ ಎಂದು ಮಾಹಿತಿಯನ್ನು ನೀಡಲಾಗಿದೆ.