Job Description: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಲಾಕ್ ಡೌನ್ ಸಮಯದಲ್ಲಿ ಕೋವಿಡ್ ಹರಡದಂತೆ ತಡೆಯಲು ತೆಗೆದುಕೊಂಡ ಮುನ್ನೆಚ್ಚರಿಕಾ ಕ್ರಮಗಳ ಕಾರಣ, ದೇಶದ ಸುರಕ್ಷಿತ ವಿಮಾನ ನಿಲ್ದಾಣಗಳ ಪೈಕಿ KIA ಗೆ 3ನೇ ಸ್ಥಾನ ಪಡೆದುಕೊಂಡಿದೆ. ಲಾಕ್ ಡೌನ್ ಬಳಿಕ ಮೊದಲು ನವದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣ ಮತ್ತು ಮುಂಬೈನ ಶಿವಾಜಿ ಮಹಾರಾಜ್ ವಿಮಾನ ನಿಲ್ದಾಣಗಳು ಕಾರ್ಯಾಚರಣೆ ಆರಂಭಿಸಿದ್ದವು. ನಂತರ ಮೇ 25ರಂದು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ವಿಮಾನಗಳ ಸಂಚಾರ ಆರಂಭಿಸಿತ್ತು. # Safe Travel Barometer ಸಂಗ್ರಹಿದ ಮಾಹಿತಿಯನ್ನು ಆದರಿಸಿ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಲ್ಲಿ ದೇಶದಲ್ಲಿಯೇ 3ನೇ ಸ್ಥಾನವನ್ನು ಕೆಎಐಗೆ ನೀಡಿದೆ. # ಪ್ರಯಾಣಿಕರ ಸುರಕ್ಷಿತ ಪ್ರಯಾಣದ ಪಟ್ಟಿಯಲ್ಲಿ 5 ಅಂಕಗಳಿವೆ, ಬೆಂಗಳೂರು ವಿಮಾನ ನಿಲ್ದಾಣ 4 ಅಂಕಗಳನ್ನು ಪಡೆದು ಮೂರನೇ ಸ್ಥಾನವನ್ನು ಪಡೆದಿದೆ. # ವಿಮಾನ ಪ್ರಯಾಣಿಕರಿಗೆ ಸುರಕ್ಷತೆ ದೃಷ್ಟಿಯಿಂದ ಕೋವಿಡ್ ಪರೀಕ್ಷೆ, ಥರ್ಮಲ್ ಸ್ಕ್ರೀನಿಂಗ್, ಟ್ರಾಲೆವರ್ ಫೇಸ್ ಮಾಸ್ಕ್ ವಿತರಣೆ, ಸಿಬ್ಬಂದಿಗೆ ಪಿಪಿಇ ಕಿಟ್ ವಿತರಣೆ ಸೇರಿದಂತೆ ವಿವಿಧ ಅಂಶಗಳನ್ನು ಪರಿಗಣನೆ ಮಾಡಿ ಅಂಕ ಕೊಡಲಾಗಿದೆ.