Job Description: ನವದೆಹಲಿ : ಭಾರತದ ಮೊದಲ ಮಹಿಳಾ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರ 103 ನೇ ಜನ್ಮದಿನಾಚರಣೆಯನ್ನು ಇದೆ ನವೆಂಬರ್ 19 ರಂದು ದೇಶ್ಯಾದ್ಯಂತ ಆಚರಿಸಲಾಯಿತು. ಇಂದಿರಾ ಗಾಂಧಿಯವರು ಉಕ್ಕಿನ ಮಹಿಳೆ ಎಂದೇ ಖ್ಯಾತರಾಗಿದ್ದರು. ಇವರ 103ನೇ ಜನ್ಮದಿನದಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿ ವಿವಿಧ ಗಣ್ಯರು, ನಾಯಕರುಗಳು ಮಾಜಿ ಪ್ರಧಾನಿಯನ್ನು ಸ್ಮರಿಸಿಕೊಂಡರು. ಇಂದಿರಾ ಗಾಂಧಿಯವರು 1917ರ ನವೆಂಬರ್ 19ರಂದು ಜನಿಸಿದರು. ಇವರು ಭಾರತದ ಪ್ರಧಾನ ಮಂತ್ರಿಯಾಗಿ 1966 ರಿಂದ 1977ರವರೆಗೆ ಮೊದಲನೇ ಅವಧಿಯಲ್ಲಿ ನಂತರ 1980 ರಿಂದ ಅವರ ಹತ್ಯೆಯಾಗುವವರೆಗೆ ಅಂದರೆ 1984 ರವರೆಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ.