Job Description: ಇತ್ತೀಚಿಗಷ್ಟೇ ಅರಬ್ ರಾಷ್ಟ್ರದಲ್ಲಿ 13ನೇ ಆವೃತ್ತಿ ಐಪಿಎಲ್ ಟೂರ್ನಿಯನ್ನು ಯಶಸ್ವಿಯಾಗಿ ನಡೆಸಿತು, ಹಾಗು ಮುಂಬೈ ಇಂಡಿಯನ್ಸ್ ತಂಡವು ದೆಹಲಿ ತಂಡದ ವಿರುದ್ಧ ಜಯಸಾದಿಸಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಇದೀಗ ಎಲ್ಲರ ಚಿತ್ತ 14 ನೇ ಆವೃತ್ತಿಯತ್ತ ನೆಟ್ಟಿರುವ ಈ ಸಮಯದಲ್ಲಿ 8 ತಂಡಗಳ ಬದಲಾಗಿ 9 ತಂಡಗಳು ಭಾಗವಹಿಸಲಿದ್ದು, 9ನೇ ತಂಡವಾಗಿ ಅಹಮದಾಬಾದ್ ನಗರದ ಫ್ರಾಂಚೈಸಿ ಸೇರ್ಪಡೆಗೊಳ್ಳವ ಸಾಧ್ಯತೆ ಇರುವದಾಗಿ ತಿಳಿದು ಬಂದಿದೆ. ಈ ತಂಡದ ತವರು ಮೈದಾನವಾಗಿ ನೂತನ ಸ್ಟೇಡಿಯಂ ಸರ್ದಾರ್ ವಲ್ಲಾಭಾಯ್ ಸ್ಟೇಡಿಯಂ ಆಗಿರಲಿದೆ.