Job Description: ಮುಂಬಯಿ: ವಿಮಾನಯಾನ ಸಂಸ್ಥೆಯಾದ ಏರ್ ಇಂಡಿಯಾವು ಇದೆ ಮೊದಲ ಬಾರಿ ಮಹಿಳಾ ಸಿಇಒ ಆಗಿ ಹರ್ಪ್ರೀತ್ ಎ. ಡಿ. ಸಿಂಗ್ ಅವರನ್ನು ನೇಮಿಸಿದೆ. ಭಾರತದಲ್ಲಿ ಮಾತ್ರವೇ ತನ್ನ ಕಾರ್ಯಾ ವ್ಯಾಪ್ತಿಯನ್ನು ಹೊಂದಿರುವ "ಏರ್ ಇಂಡಿಯಾ" ಸಂಸ್ಥೆಯ ಅಂಗ ಸಂಸ್ಥೆಯಾದ "ಅಲಯನ್ಸ್ ಏರ್"ಗೆ ಹರ್ಪ್ರೀತ್ ಎ. ಡಿ. ಸಿಂಗ್ ಸಿಇಒ ಆಗಿ ನೇಮಕಗೊಂಡಿದ್ದಾರೆ. ಇಲ್ಲಿಯವರೆಗೆ ಇವರು "ಅಲಯನ್ಸ್ ಏರ್"ನ ಕಾರ್ಯ ನಿರ್ವಾಹಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು, ಇದೀಗ CEO ಹುದ್ದೆಗೆ ಬಡ್ತಿ ಪಡೆದಿದ್ದು, ಏರ್ ಇಂಡಿಯಾ ನೇಮಕ ಮಾಡಿಕೊಂಡ ಮೊದಲ ಮಹಿಳಾ ಪೈಲಟ್ ಹರ್ಪ್ರೀತ್.