Job Description: ಮುಂಬೈ: ಪ್ರಸಕ್ತ ತ್ರೈಮಾಸಿಕದ ವಿತ್ತೀಯ ನೀತಿಯನ್ನು ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಪ್ರಕಟಿಸಿದ್ದು, ರೆಪೊ ದರ ಯಾವುದೇ ಬದಲಾವಣೆ ಇಲ್ಲದೆ ಶೇಕಡಾ 4ರಷ್ಟೇ ಮುಂದುವರಿಯಲಿದೆ. ಹಾಗೂ ರಿಸರ್ವ್ ರೆಪೊ ದರ ಕೂಡ ಬದಲಾಗದೆ ಶೇಕಡಾ 3.35ರಷ್ಟು ಮುಂದುವರಿಯಲಿದೆ ಎಂದು ಮಾಹಿತಿ ನೀಡಿದರು. ಇನ್ನು 2020-2021ರ ಆರ್ಥಿಕ ವರ್ಷದಲ್ಲಿ ಭಾರತದ ಒಟ್ಟು GDP ಬೆಳವಣಿಗೆ ದರ ಶೇಕಡಾ 9.5ರಷ್ಟು ಕಡಿಮೆಯಾಗುವ ಸಾಧ್ಯತೆ ಇರುವುದಾಗಿ ಇದೆ ಎಂದು ತಿಳಿಸಿದರು.