Job Description: ನವದೆಹಲಿ: ಭಾರತದ ರಕ್ಷಣಾ ಸಚಿವಾಲಯವು 'ರಕ್ಷಣಾ ಸಾಮಗ್ರಿ ಖರೀದಿ' ನಿಯಮವನ್ನು ಬದಲಾಯಿಸಿದ್ದು, ಸರ್ಕಾರ-ಸರ್ಕಾರದ ಅಥವಾ ಸರ್ಕಾರ-ವಿದೇಶಿ ಏಕ ಏಜೆನ್ಸಿಗಳ ನಡುವಿನ ಒಪ್ಪಂದದ 'ವಿದೇಶಿ ಹೂಡಿಕೆ' ಷರತ್ತನ್ನು ರದ್ದುಪಡಿಸಿದೆ. 2006 ರಲ್ಲಿ ಯುಪಿಎ ಸರ್ಕಾರ ಜಾರಿಗೆ ತಂದ ಷರತ್ತಿನ ಪ್ರಕಾರ ಇಲ್ಲಿಯವರೆಗೆ ಭಾರತವು ವಿದೇಶಿ ಕಂಪನಿಯಿಂದ ರಕ್ಷಣಾ ಸಾಮಗ್ರಿ ಖರೀದಿಸಿದಲ್ಲಿ, ಆ ಸಂಸ್ಥೆಯು ಒಂದು ಭಾಗವನ್ನು ಭಾರತದಲ್ಲೇ ಹೂಡಿಕೆ ಮಾಡುವದು ಕಡ್ಡಯಾಗಿತ್ತು, ಇದೀಗ ಈ ಷರತ್ತನ್ನು ತೆಗೆದುಹಾಕಲಾಗಿದೆ. ಇದೆ ವೇಳೆ ₹780 ಕೋಟಿ ಮೌಲ್ಯದ ಅಮೆರಿಕದ ಸಿಗ್ ಸೌರ್ ಬಂದೂಕುಗಳ ಖರೀದಿ ಸೇರಿದಂತೆ ಭಾರತೀಯ ರಕ್ಷಣಾ ವಲಯಕ್ಕೆ ಒಟ್ಟು ₹2,290 ಕೋಟಿ ಮೊತ್ತದ ಶಸ್ತ್ರಾಸ್ತ್ರ ಖರೀದಿಗೆ ರಕ್ಷಣಾ ಸಚಿವಾಲಯ ಸೋಮವಾರ ಒಪ್ಪಿಗೆ ನೀಡಿದೆ.