Job Description: ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಗತ್ ಸಿಂಗ್ ಅವರು ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಬ್ರಿಟಿಷರ ವಿರುದ್ಧ ತಮ್ಮ ಕ್ರಾಂತಿಕಾರಿ ಹೋರಾಟದ ಮೂಲಕ ಎದೆಗುಂದದೆ ಹೋರಾಡಿ ತನ್ನ 23ನೇ ವಯಸ್ಸಿನಲ್ಲೇ ವೀರಮರಣ ಹೊಂದಿದರು. ಸೆಪ್ಟೆಂಬರ್ 28 ರಂದು ಇವರ 113ನೇ ಜನ್ಮ ದಿನವಾಗಿದೆ. ಇವರು ಸೆಪ್ಟೆಂಬರ್ 28ರ 1907ರಲ್ಲಿ ಇಂದಿನ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಫೈಸಲಾಬಾದ್ ಜಿಲ್ಲೆಯ ಬಾಂಗಾ ಗ್ರಾಮದಲ್ಲಿ ಜನಿಸಿದರು. * ಭಗತ್ ಸಿಂಗ್ ತಂದೆ ಕಿಶನ್ ಸಿಂಗ್ ಮತ್ತು ತಾಯಿ ವಿದ್ಯಾವತಿ. * 1919ರಲ್ಲಿ ಭಗತ್ ಸಿಂಗ್ ತಮ್ಮ 12ನೇ ವಯಸ್ಸಿನಲ್ಲಿ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಸ್ಥಳಕ್ಕೆ ಭೇಟಿ ನೀಡಿ, ಮೊದಲ ಬಾರಿಗೆ ಕ್ರಾಂತಿ ಮನೋಭಾವನೆ ಬೆಳೆಸಿಕೊಂಡರು. * ಭಗತ್ ಸಿಂಗ್ ತಮ್ಮ ಕೊನೆಯುಸಿರುವವರೆಗೂ ಬ್ರಿಟಿಷರ ವಿರುದ್ಧ ಹೋರಾಡಿ 1931ರಲ್ಲಿ ಗೆಳೆಯರಾದ ರಾಜ್ಗುರು ಮತ್ತು ಸುಖದೇವ್ ರೊಂದಿಗೆ ಗಲ್ಲು ಶಿಕ್ಷೆಗೆ ಗುರಿಯಾಗಿ ವೀರಮರಣ ಹೊಂದಿದರು.