Job Description: ಮಾಸ್ಕೋ: ಭಾರತದ ದೇಶದ ಪ್ರಮುಖ ಔಷಧ ತಯಾರಿಕಾ ಕಂಪನಿ ಹೈದರಾಬಾದ್ನ ಡಾ. ರೆಡ್ಡೀಸ್ ಲ್ಯಾಬೊರೇಟರಿಯು ವಿಶ್ವದ ಮೊದಲ ನೋಂದಾಯಿತ ಕೋವಿಡ್ ಲಸಿಕೆ 'ಸ್ಪುಟ್ನಿಕ್-V' ಅನ್ನು ಭಾರತದಲ್ಲಿ ಪರೀಕ್ಷೆಗೆ ಒಳಪಡಿಸಲು ಮತ್ತು ಮಾರಾಟ ಮಾಡಲು ರಷ್ಯಾ ಜತೆ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದ ಪ್ರಕಾರ, ರೆಡ್ಡೀಸ್ ಲ್ಯಾಬೊರೇಟರಿಗೆ ಅಂದಾಜು 10 ಕೋಟಿ ಡೋಸ್ಗಳಷ್ಟು 'ಸ್ಪುಟ್ನಿಕ್-ವಿ' ಲಸಿಕೆ ಆಮದಾಗಲಿದೆ. ಈ ಲಸಿಕೆಯನ್ನು ಭಾರತದಲ್ಲಿ ಮೂರು ಹಂತದಲ್ಲಿ ಪ್ರಾಯೋಗಿಕ ಪರೀಕ್ಷೆಗೆ ಒಳಪಡಿಸಲಿದ್ದು, ಈ ಪರೀಕ್ಷೆಯಲ್ಲಿ ಯಶಸ್ಸು ಕಂಡುಬಂದರೆ ಮಾತ್ರ ರಷ್ಯಾದ ಲಸಿಕೆಯನ್ನು ಲ್ಯಾಬ್ ಮಾರಾಟ ಮಾಡಲಿದೆ.