Job Description: ಕೊಯಿಕ್ಕೋಡ್ : ದುಬೈ ಯಿಂದ ಕೋಯಿಕ್ಕೋಡ್ ನಡುವೆ ಸಂಚರಿಸುತ್ತಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ (IX-1344 B737) ಕೇರಳದ ಕೋಯಿಕ್ಕೋಡ್ನ ಕರಿಪುರ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುವ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಅವಘಡಕ್ಕೀಡಾಗಿದೆ. ಈ ಘಟನೆಯಲ್ಲಿ ಸರಿಸುಮಾರು 15 ಮಂದಿ ಮೃತಪಟ್ಟಿದ್ದು, 123 ಮಂದಿಗೆ ಗಾಯಗಳಾಗಿರುವದಾಗಿ ತಿಳಿದುಬಂದಿದೆ. ವಿಮಾನದಲ್ಲಿ ದೀಪಕ್ ವಿ ಸಾಠೆ ಎಂಬ ಅನುಭವಿ ಪೈಲಟ್ ಮೃತಪಟ್ಟಿದ್ದು, ಇವರು ಭಾರತೀಯ ವಾಯುಪಡೆಯಲ್ಲೂ ಅವರು ಕಾರ್ಯನಿರ್ವಹಿಸಿದ್ದರು. ಈ ವಿಮಾನವು ವಂದೇ ಭಾರತ್ ಮಿಷನ್ ಅಡಿಯಲ್ಲಿ ದುಬೈನಿಂದ ಭಾರತಕ್ಕೆ ಪ್ರಯಾಣಿಕರನ್ನು ಕರೆ ತರುತ್ತಿತ್ತು.