Job Description: ವಿಶ್ವಸಂಸ್ಥೆ: ಭಾರತವು 'ಇಂಡಿಯಾ - ಯುನೈಟೆಡ್ ನೇಷನ್ಸ್ ಡೆವಲಪ್ಮೆಂಟ್ ಫಂಡ್'ಗೆ ₹112.24 ಕೋಟಿ ನೀಡಿದ್ದು, ಈ ಮೂಲಕ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಭಾರತವು ತನ್ನ ಬೆಂಬಲ ಸೂಚಿಸಿದೆ ಎಂದು ವಿಶ್ವಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿದೆ. ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿ ಆಗಿರುವ ಟಿ.ಎಸ್.ತಿರುಮೂರ್ತಿ ಅವರು ಯುಎನ್ಒಎಸ್ಎಸ್ಸಿ ನಿರ್ದೇಶಕ ಜಾರ್ಜ್ ಚೆಡಿಕ್ ಅವರಿಗೆ ಚೆಕ್ ವಿತರಿಸುವ ಮೂಲಕ ಈ ನಗದನ್ನು ಹಸ್ತಾಂತರಿಸಿದರು. ಈ ಹಣವನ್ನು UNOSSC ನಿರ್ವಹಣೆ ಮಾಡುತ್ತಿದ್ದು, ಅಭಿವೃದ್ಧಿ ಹೊಂದುತ್ತಿರುವ ಪಾಲುದಾರ ರಾಷ್ಟ್ರಗಳ ನಾಯಕತ್ವದಲ್ಲಿ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಬಳಸಲಾಗುವದು.