Job Description: ಬೈರುತ್: ಲೆಬನಾನ್ನ ರಾಜಧಾನಿ ಬೈರುತ್ನಲ್ಲಿ ಶಕ್ತಿಶಾಲಿ ಸ್ಫೋಟ ಸಂಭವಿಸಿದ್ದು, ಸುಮಾರು 100 ಕ್ಕೂ ಅಧಿಕ ಜನರು ಮೃತಪಟ್ಟಿದ್ದು, 4,000ಕ್ಕೂ ಹೆಚ್ಚು ಜನ ಗಾಯಗೊಂಡಿರುವದಾಗಿ ಹಾಗು ಸ್ಫೋಟದ ತೀವ್ರತೆಗೆ 3.5 ತೀವ್ರತೆಯ ಭೂಕಂಪನ ಸೃಷ್ಟಿಯಾಗಿತ್ತೆಂದು ವರದಿಯಾಗಿದೆ. ಸೆಂಟ್ರಲ್ ಬೈರುತ್ನ ಬಂದರು ಉಗ್ರಾಣದಲ್ಲಿ ಈ ಸ್ಫೋಟ ಸಂಭವಿಸಿದ್ದು, ಬಂದರಿನಲ್ಲಿ ಯಾವುದೇ ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳದೆ 2,750 ಟನ್ ಅಮೋನಿಯಂ ನೈಟ್ರೇಟನ್ನು ಕಳೆದ 6 ವರ್ಷದಿಂದ ದಾಸ್ತಾನು ಇರಿಸಲಾಗಿತ್ತು ಇದೆ ಕಾರಣದಿಂದಾಗಿ ಸ್ಟೋಟ ಸಂಭವಿಸಿರುವದಾಗಿ ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ.