Job Description: ವಿಶ್ವಸಂಸ್ಥೆ (ನ್ಯೂಯಾರ್ಕ್): ಉತ್ತರ ಕೊರಿಯವು ತನ್ನ ಪರಮಾಣು ಶಸ್ತ್ರಾಸ್ತ್ರ ಸಂಗ್ರಹವನ್ನು ಮತ್ತೆ ಮುಂದುವರೆಸಿರುವ ಬಗ್ಗೆ ವಿಶ್ವಸಂಸ್ಥೆಯು ಅನುಮಾನ ವ್ಯಕ್ತಪಡಿಸಿದೆ. ಉತ್ತರ ಕೊರಿಯವು ರಾಷ್ಟ್ರವು ಕೊನೆಯದಾಗಿ ನಡೆಸಿದ ಆರು ಪರಮಾಣು ಪರೀಕ್ಷೆಗಳು ಕಿರುಗಾತ್ರದ ಪರಮಾಣು ಸಾಧನಗಳನ್ನು ಅಭಿವೃದ್ಧಿಪಡಿಸುವಲ್ಲಿ ಆ ದೇಶಕ್ಕೆ ನೆರವು ನೀಡಿರುವ ಸಾಧ್ಯತೆಯಿದೆ ಎಂಬುದಾಗಿ ವಿಶ್ವಸಂಸ್ಥೆಯ ಸ್ವತಂತ್ರ ಪರಿಣತರ ಸಮಿತಿಯ ವರದಿ ತಿಳಿಸಿದೆ.