Job Description: ನವದೆಹಲಿ : ಕೇಂದ್ರ ನಾಗರಿಕ ಸೇವಾ ಆಯೋಗವು 2019ನೇ ಸಾಲಿಗೆ ನಡೆಸಿದ ನಾಗರಿಕ ಸೇವಾ ಪರೀಕ್ಷೆಗಳ ಫಲಿತಾಂಶವನ್ನು ಇತ್ತೀಚಿಗೆ ಪ್ರಕಟಿಸಿದೆ. ಈ ನೇಮಕಾತಿಯ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಯುಪಿಎಸ್ಸಿಯ ಅಧಿಕೃತ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡುವುದಾಗಿ ಆಯೋಗವು ತಿಳಿಸಿದೆ. ಈ ಪಟ್ಟಿಯನ್ನು ಆಧರಿಸಿ ಮುಂದಿನ ಉದ್ಯೋಗ ನೇಮಕಾತಿ ಪ್ರಕ್ರಿಯೆಗೆ ಶಿಫಾರಸ್ಸು ಕಳುಹಿಸಲಾಗುತ್ತದೆ. ಇಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ನಾಲ್ಕು ಹಂತಗಳಲ್ಲಿ ಉದ್ಯೋಗ ನೇಮಕಾತಿಗೆ ಶಿಫಾರಸ್ಸುಗಳನ್ನು ಕಳುಹಿಸಲಾಗುತ್ತಿದೆ. 1. ಭಾರತೀಯ ಆಡಳಿತ ಸೇವೆ 2. ಭಾರತೀಯ ವಿದೇಶಾಂಗ ಸೇವೆ 3. ಭಾರತೀಯ ಆರಕ್ಷಕ ಸೇವೆ ಮತ್ತು 4. ಕೇಂದ್ರ ಸೇವೆ- ಗ್ರೂಪ್ 'ಎ', ಗ್ರೂಪ್ 'ಬಿ'