Job Description: ಎಚ್ಡಿಎಫ್ಸಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಶಶಿಧರ್ ಜಗದೀಶನ್ ಅವರನ್ನು ನೇಮಕ ಮಾಡಲು ರಿಸರ್ವ ಬ್ಯಾಂಕ್ ಅನುಮತಿ ನೀಡಿದೆ. ಶಶಿಧರ್ ಜಗದೀಶನ್ ಅವರು 1996 ರಿಂದ ಎಚ್ಡಿಎಫ್ಸಿ ಬ್ಯಾಂಕಿನಲ್ಲಿ “ಚೇಂಜ್ ಏಜೆಂಟ್” ಆಗಿ ಕೆಲಸ ನಿರ್ವಹಿಸುತ್ತಿದ್ದರು. ಕಳೆದ 25 ವರ್ಷಗಳಿಂದ ಈ ಹುದ್ದೆಯನ್ನು ಆದಿತ್ಯ ಪುರಿ ನಿರ್ವಹಿಸುತ್ತಿದ್ದರು. ಬ್ಯಾಂಕ್ ಅನ್ನು ಕಾರ್ಯವಿಧಾನ ಯಶಸ್ವಿಯಾಗಿ ನಿರ್ವಹಿಸಿ ಎರಡನೇ ಅತಿ ದೊಡ್ಡ ಖಾಸಗಿ ವಲಯದ ಬ್ಯಾಂಕ್ ಆಗಿ ಮಾರ್ಪಡಿಸಿದ್ದರು. ಆದಿತ್ಯ ಪುರಿ ಈ ವರ್ಷದ ಅಕ್ಟೋಬರ್ 20 ರಂದು ಅಧಿಕೃತವಾಗಿ ನಿವೃತ್ತರಾಗಲಿದ್ದಾರೆ.