Job Description: ಪ್ರಮುಖ ಫೋನ್ ತಯಾರಿಕೆ ಕಂಪೆನಿಯಾಗಿರುವ ಆಪಲ್ ಸಂಸ್ಥೆಯು ಇದೀಗ ವಿಶ್ವದಲ್ಲೇ ಅತ್ಯಂತ ಮೌಲ್ಯಯುತ ಕಂಪೆನಿ ಎನಿಸಿಕೊಂಡಿದೆ. ಇಲ್ಲಿಯವರೆಗೆ ಈ ಸ್ಥಾನವನ್ನು ಅರೇಬಿಯಾದ ರಾಷ್ಟ್ರೀಯ ತೈಲ ಕಂಪೆನಿ ಸೌದಿ ಅರಾಮ್ಕೋ ಹೊಂದಿತ್ತಾದರೂ, ಆಪಲ್ ಕಂಪೆನಿಯ ಷೇರುಗಳು ಶೇಕಡಾ 10% ಏರಿಕೆ ಕಂಡ ಹಿನ್ನಲೆ ಈ ಸ್ಥಾನ ಆಪಲ್ ಪಾಲಾಗಿದೆ. * ಆಪಲ್ ಕಂಪೆನಿಯ ಮಾರುಕಟ್ಟೆ ಬಂಡವಾಳ ಮೌಲ್ಯ $ 1.817 ಟ್ರಿಲಿಯನ್ (ಅಂದಾಜು 135 ಲಕ್ಷ ಕೋಟಿ) ಗೂ ಹೆಚ್ಚಾಗುತ್ತದೆ.