Job Description: ಖ್ಯಾತ ಗಣಿತ ಶಾಸ್ತ್ರಜ್ಞೆ ಹಾಗೂ ಮಾನವ ಕಂಪ್ಯೂಟರ್ ಎಂದೇ ಹೆಸರಾಗಿದ್ದ ಭಾರತದ ಶಕುಂತಲಾ ದೇವಿ ಅವರು 40 ವರ್ಷಗಳ ಹಿಂದೆ ಮಾಡಿದ ವಿಶ್ವ ದಾಖಲೆ ಸಾಧನೆ ಇದೀಗ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾಗಿದೆ. ಶಕುಂತಲಾ ದೇವಿ ಅವರಿಗೆ ದಿನಾಂಕ 30 ಜೂಲೈ 2020 ರಂದು ಗಿನ್ನಿಸ್ ವಿಶ್ವ ದಾಖಲೆಯ ಪ್ರಮಾಣಪತ್ರವನ್ನು ಮರಣೋತ್ತರವಾಗಿ ನೀಡಲಾಯಿತು. ಶಾಂತಾದೇವಿಯವರು ಯುನೈಟೆಡ್ ಕಿಂಗ್ ಡಮ್ ನ ಲಂಡನ್ ಇಂಪೀರಿಯಲ್ ಕಾಲೇಜ್ ನಲ್ಲಿ ತಮ್ಮ ವಿದ್ಯಾಭ್ಯಾಸ ಮಾಡುವ ಸಮಯದಲ್ಲಿ 1980 ಜೂನ್ 18 ರಂದು ಕೇವಲ 28 ಸೆಕೆಂಡ್ ಗಳಲ್ಲಿ 13 ಅಂಕೆಗಳ ಎರಡು ಲೆಕ್ಕವನ್ನು ಗುಣಿಸಿ ಸರಿ ಉತ್ತರ ನೀಡುವ ಮೂಲಕ ದಾಖಲೆ ಬರೆದಿದ್ದರು. * ಖ್ಯಾತ ಗಣಿತ ತಜ್ಞೆಯ ಮಗಳು ಅನುಪಮಾ ಬ್ಯಾನರ್ಜಿ ತಮ್ಮ ಮೃತ ತಾಯಿಯ ಪರವಾಗಿ ವಿಶ್ವ ದಾಖಲೆಯ ಪ್ರಮಾಣಪತ್ರ ಪಡೆದರು.