Job Description: ನವದೆಹಲಿ : ಕೇಂದ್ರ ಭೂ ವಿಜ್ಞಾನ ಇಲಾಖೆಯಿಂದ ಹವಾಮಾನ ಮುನ್ಸೂಚನೆ ಹಾಗೂ ವೈಪರೀತ್ಯಗಳ ಕುರಿತ ಮುನ್ನೆಚ್ಚರಿಕೆ ಸಲುವಾಗಿ ನೂತನ ಮೊಬೈಲ್ ಆಯಪ್ ಅಭಿವೃದ್ಧಿ ಪಡಿಸಿದ್ದು, ಈ ಆಯಪ್ ಮೂಲಕ ಹವಾಮಾನ ಮುನ್ಸೂಚನೆ ಹಾಗೂ ನಗರದ ಇತರ ಮಾಹಿತಿಯನ್ನು ಸುಲಭವಾಗಿ ಪಡೆಯಬಹುದಾಗಿದೆ. * ಈ ಆಯಪ್ ಅನ್ನು ಭೂವಿಜ್ಞಾನ ಸಚಿವ ಡಾ. ಹರ್ಷವರ್ಧನ್ ಅವರು ಇತ್ತೀಚಿಗೆ ಬಿಡುಗಡೆ ಮಾಡಿದರು. * ಮೌಸಮ್ ಹೆಸರಿನ ಮೊಬೈಲ್ ಆಯಪ್ ಮೂಲಕ ದೇಶದ 200 ನಗರಗಳ ಪ್ರಸಕ್ತ ತಾಪಾಮಾನ, ತೇವಾಂಶ, ಆರ್ದ್ರತೆ, ಗಾಳಿಯ ವೇಗ ಹಾಗೂ ದಿಕ್ಕಗಳ ವಿವರಗಳನ್ನು ಪಡೆಯಬಹುದಾಗಿದೆ. * ಮೌಸಮ್ ಹೆಸರಿನ ಈ ಮೊಬೈಲ್ ಅಯಪ್ ಅನ್ನು "ಇಂಟರ್ನ್ಯಾಷನಲ್ ಕಾರ್ಪ್ಸ್ ಇನ್ಸ್ಟಿಟ್ಯೂಟ್ ಫಾರ್ ಸೆಮಿ ಆರಿಟ್ ಟ್ರಾಫಿಕ್ಸ್, ಇಂಡಿಯನ್ ಇನ್ಸ್ಟಿಟ್ಯೂಟ್ ಟ್ರಾಪಿಕಲ್ ಮೆಟಿಯಾಲಜಿ, ಪುಣೆ ಮತ್ತು ಭಾರತದ ಹವಾಮಾನ ಇಲಾಖೆ ಜಂಟಿಯಾಗಿ ಅಭಿವೃದ್ಧಿಪಡಿಸಿದೆ.