Job Description: ನವದೆಹಲಿ : ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರುವ ಉದ್ದೇಶದಿಂದ ಕೇಂದ್ರ ಸರ್ಕಾರವು ವಂದೇ ಭಾರತ್ ಮಿಷನ್ ಆರಂಭಿಸಿದ್ದು, ಈ ಯೋಜನೆಯಡಿಯಲ್ಲಿ ಅಡಿ ವಿಶೇಷ ವಿಮಾನಗಳನ್ನು ವಿದೇಶಗಳಿಗೆ ಕಳುಹಿಸಲಾಗುತ್ತಿದೆ ಹಾಗೂ ಅಲ್ಲಿ ನೆಲೆಸಿರುವ ಭಾರತೀಯರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಗುತ್ತಿದೆ. * ಇದೀಗ ವಂದೇ ಭಾರತ್ ಮಿಷನ್ನ 5ನೇ ಹಂತದ ಸಿದ್ಧತೆ ನಡೆಸಿದ್ದು, ಇದೆ ಆಗಸ್ಟ್ 1ರಿಂದ 5 ನೇ ಹಂತ ಆರಂಭವಾಗಲಿದೆ. * ಆಗಸ್ಟ್ 1ರಿಂದ ಆರಂಭವಾಗುವ ಐದನೇ ಹಂತದಲ್ಲಿ ಅಮೆರಿಕಾ, ಕೆನಡಾ, ಕತಾರ್, ಒಮಾನ್, ಯುಎಇ, ಆಸ್ಟ್ರೇಲಿಯಾ, ಜರ್ಮನಿ, ಥೈಲ್ಯಾಂಡ್, ಸಿಂಗಾಪುರ್, ಇಂಗ್ಲೆಂಡ್, ಜರ್ಮನಿ, ಸೌದಿ ಅರೆಬಿಯಾ, ಬಹ್ರೇನ್, ನ್ಯೂಜಿಲೆಂಡ್, ಫಿಲಿಪೈನ್ಸ್ ಸೇರಿ ಅನೇಕ ರಾಷ್ಟ್ರಗಳಿಗೆ ವಿಮಾನಗಳನ್ನು ಕಳುಹಿಸಿ, ಭಾರತೀಯರನ್ನು ಕರೆತರಲು ಉದ್ದೇಶಿಸಲಾಗಿದೆ. * ಜುಲೈ 22ರವರೆಗೂ ಕೊರೋನಾ ವೈರಸ್ ಕಾರಣದಿಂದ ವಿದೇಶದಲ್ಲಿ ಸಿಲುಕಿದ್ದ ಸುಮಾರು 7.88 ಲಕ್ಷ ಭಾರತೀಯರನ್ನು ವಂದೇ ಭಾರತ್ ಮಿಷನ್ನಡಿ ಭಾರತಕ್ಕೆ ವಾಪಾಸ್ ಕರೆತರಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ವರದಿಮಾಡಿದೆ.