Job Description: ಬಾಲಾಸೋರ್ : ಓಡಿಶಾದ ಬಾಲಾಸೋರ್ನ ಸುಜಾನ್ಪುರ ಗ್ರಾಮದ ನಿವಾಸಿಗಳು ಅತ್ಯಂತ ಅಪರೂಪದ ಹಳದಿ ಬಣ್ಣದ ಆಮೆಯೊಂದನ್ನು ಪತ್ತೆ ಮಾಡಿದ್ದಾರೆ. ಗ್ರಾಮಸ್ಥರು ಈ ಆಮೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳ ವಶಕ್ಕೆ ಒಪ್ಪಿಸಿದ್ದಾರೆ. ಅಧಿಕಾರಿಗಳ ಪ್ರಕಾರ ಈ ಆಮೆಯು ಚರ್ಮ ಬಿಳಿಚುವಿಕೆ (Albino) ರೋಗದಿಂದ ಬಳಲುತ್ತಿರಬಹುದು. ಇದರ ಕಣ್ಣು ಕೂಡ ನಸುಗೆಂಪು ಬಣ್ಣದಿಂದ ಕೂಡಿದೆ. ಇದು ಕೂಡ ಚರ್ಮದ ಬಿಳಿಚುವಿಕೆಯ ರೋಗದ ಲಕ್ಷಣವಾಗಿದೆ ಎಂದು ವಿವರಿಸಿದ್ದಾರೆ.