Job Description: ನವದೆಹಲಿ: ಭಾರತದಲ್ಲಿ ಮೊದಲ ಖಾಸಗಿ ರೈಲು 2023ಕ್ಕೆ ತನ್ನ ಸಂಚಾರ ಆರಂಭಿಸಲಿದ್ದು, ಮೊದಲ ಹಂತದಲ್ಲಿ 12 ಖಾಸಗಿ ರೈಲುಗಳನ್ನು 2023ರ ವೇಳೆಗೆ ಪರಿಚಯಿಸಲಾಗುವುದೆಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮುಂದಿನ ಹಣಕಾಸು ವರ್ಷದಲ್ಲಿ ಇನ್ನೂ 45 ಮಾರ್ಗಗಳಲ್ಲಿ ಟೈಮ್ಲೈನ್ ಅನುಸಾರ ಈ ರೈಲುಗಳ ಸಂಚಾರ ಆರಂಬಿಸಲಾಗುವದು. ಅಲ್ಲದೆ 2027 ರ ವೇಳೆಗೆ ಯೋಜನೆಯ ಎಲ್ಲಾ 151 ಖಾಸಗಿ ರೈಲುಗಳು ಹಳಿ ಮೇಲೆ ಸಂಚರಿಸಲಿದೆ ಎಂದು ತಿಳಿದುಬಂದಿದೆ. ಖಾಸಗಿ ರೈಲುಗಳ ಯೋಜನೆಯ ಭಾಗವಾಗಿ ಸಂಚರಿಸಲು ಉದ್ದೇಶಿಸಿರುವ ವಿವರ: 2022-23ರಲ್ಲಿ 12, 2023-2024ರಲ್ಲಿ 45, 2025-26ರಲ್ಲಿ 50 ಮತ್ತು ಅಂತಿಮವಾಗಿ 2026-2027ರಲ್ಲಿ 151 ರೈಲುಗಳು ಹಳಿ ಮೇಲೆ ಸಂಚಾರ ನಡೆಸಲಿದೆ.