Job Description: ಟೋಕಿಯೊ : ಇದೇ ಪ್ರಪ್ರಥಮ ಬಾರಿ ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ಯು ಮಂಗಳ ಗ್ರಹದ ಶೋಧ ಕಾರ್ಯಾಚರಣೆಗಾಗಿ ಬಾಹ್ಯಾಕಾಶ ಯಾನ ಆರಂಭಿಸಿದ್ದು, ಜಪಾನ್ನ ರಾಕೆಟ್ ಮೂಲಕ 'ಹೋಪ್' ಶೋಧಕ ಗಗನ ನೌಕೆಯನ್ನು ಯಶಸ್ವಿ ಉಡಾವಣೆಗೊಳಿಸಲಾಯಿತು. ಈ ಗಗನ ನೌಕೆಯನ್ನು 'ಹೋಪ್' ಎಂದು ಕರೆಯಲಾಗುತ್ತಿದ್ದು, ಈ ನೌಕೆಯು ಮಾನವರಹಿತ ಗಗನ ಶೋಧಕವಾಗಿದ್ದು, ದಕ್ಷಿಣ ಜಪಾನ್ನ ತನೆಗಾಶಿಮಾ ಬಾಹ್ಯಾಕಾಶ ಕೇಂದ್ರದಿಂದ ದಿನಾಂಕ 20-07-2020 ರ ಬೆಳಗ್ಗೆ 6:58ಕ್ಕೆ(ಸ್ಥಳೀಯ ಕಾಲಮಾನ) ಉಡಾವಣೆಗೊಂಡಿತು. ಇದೆ ವೇಳೆ 'ಹೋಪ್ ಮಿಶನ್' ಸಂಭ್ರಮ ಆಚರಿಸಲು ದುಬೈನಲ್ಲಿ ಜಗತ್ತಿನ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫಾದ ಮೇಲೆ 10 ಸೆಕೆಂಡ್ಗಳ ಕೌಂಟ್ಡೌನ್ನ ಬೆಳಕಿನ ಚಿತ್ತಾರ ಮೂಡಿಸಿ ಸಂಭ್ರಮಿಸಲಾಯಿತು.