Job Description: ನವದೆಹಲಿ : ಭಾರತದಲ್ಲಿ 2005-06 ರಿಂದ 2015-16ರ ಅವಧಿಯಲ್ಲಿ 273 ಮಿಲಿಯನ್ ಜನರು ಬಡತನದಿಂದ ಮುಕ್ತರಾಗಿದ್ದು, ಮತ್ತು ಈ ಅವಧಿಯಲ್ಲಿ ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಬಡವರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಇಳಿಮುಖವಾಗಿದೆ ಎಂದು ವಿಶ್ವಸಂಸ್ಥೆಯ ವರದಿ ಮಾಡಿದೆ. ಯುನೈಟೆಡ್ ನೇಷನ್ಸ್ ಡೆವಲಪ್ಮೆಂಟ್ ಪ್ರೋಗ್ರಾಂ (ಯುಎನ್ಡಿಎ) ಮತ್ತು ಆಕ್ಸ್ಫರ್ಡ್ ಪಾವರ್ಟಿ ಅಂಡ್ ಹ್ಯೂಮನ್ ಡೆವಲಪ್ಮೆಂಟ್ ಇನಿಶಿಯೇಟಿವ್ (ಒಪಿಹೆಚ್ಐ) ಬಿಡುಗಡೆ ಮಾಡಿದ ಮಾಹಿತಿಯ ಅನುಸಾರ 75 ದೇಶಗಳಲ್ಲಿ 65 ದೇಶಗಳು 2000 ಮತ್ತು 2019 ರ ನಡುವೆ ತಮ್ಮ ಬಹು ಆಯಾಮದ ಬಡತನದ ಮಟ್ಟವನ್ನು ಗಮನಾರ್ಹವಾಗಿ ಕಡಿಮೆ ಮಾಡಿವೆ ಎಂದು ತಿಳಿಸಿದೆ.