Job Description: ವಾಶಿಂಗ್ಟನ್ : ಅಮೆರಿಕದ ನಾಗರಿಕ ಹಕ್ಕುಗಳ ಚಳವಳಿಯ ನಾಯಕ ಹಾಗೂ ಮಾಜಿ ಅಮೆರಿಕ ಕಾಂಗ್ರೆಸ್ ಸಂಸದ ಜಾನ್ ಲೆವಿಸ್ ತಮ್ಮ 80 ವರ್ಷ ವಯಸ್ಸಿನಲ್ಲಿ ನಿಧನರಾದರು. * 1963ರಲ್ಲಿ ವರ್ಣಭೇದದ ವಿರುದ್ಧ ನಡೆದ ಐತಿಹಾಸಿಕ ಪಾದಯಾತ್ರೆ ಆಯೋಜನೆಯಲ್ಲಿ ಜನಾಂಗೀಯವಾದ ವಿರೋಧಿ ಹೋರಾಟಗಾರ ಮಾರ್ಟಿನ್ ಲೂಥರ್ ಕಿಂಗ್ ಅವರಿಗೆ ನೆರವಾಗಿದ್ದರು. * 1963ರ ನಾಗರಿಕಹಕ್ಕು ಚಳವಳಿಯ ಸಮಯದಲ್ಲಿ ಸ್ಥಾಪನೆಯಾದ ಅಹಿಂಸಾತ್ಮಕ ವಿದ್ಯಾರ್ಥಿ ಸಮನ್ವಯ ಸಮಿತಿ (ಎಸ್ಎನಸಿಸಿ)ಯ ಸ್ಥಾಪಕ ಸದಸ್ಯರಲ್ಲಿ ಲೂಯಿಸ್ ಅವರೂ ಒಬ್ಬರಾಗಿದ್ದರು.