Job Description: ನವದೆಹಲಿ : ಭಾರತ ಮತ್ತು ಇಸ್ರೇಲ್ ರಾಷ್ಟ್ರಗಳು ಸೈಬರ್ ಬೆದರಿಕೆಗಳನ್ನು ಎದುರಿಸುವಲ್ಲಿ ತಮ್ಮ ಸಹಯೋಗವನ್ನು ವಿಸ್ತರಿಸಲು ಜುಲೈ 15, 2020 ರಂದು ಒಪ್ಪಂದಗಳಿಗೆ ಸಹಿ ಹಾಕಿದವು. ಇಸ್ರೇಲ್ನ ರಾಷ್ಟ್ರೀಯ ಸೈಬರ್ ನಿರ್ದೇಶನಾಲಯದ (ಐಎನ್ಸಿಡಿ) ಮಹಾನಿರ್ದೇಶಕರು ಮತ್ತು ಇಸ್ರೇಲ್ನಲ್ಲಿ ಭಾರತದ ರಾಯಭಾರಿ ಸಂಜೀವ್ ಸಿಂಗ್ಲಾ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. * ಈ ಒಪ್ಪಂದವು ಸೈಬರ್ ಬೆದರಿಕೆಗಳ ಕುರಿತು ದೇಶಗಳ ನಡುವೆ ಮಾಹಿತಿ ವಿನಿಮಯದ ವ್ಯಾಪ್ತಿಯನ್ನು ವಿಸ್ತರಿಸುತ್ತದೆ. * 2017 ರಲ್ಲಿ ಪ್ರಧಾನಿ ಮೋದಿ ಇಸ್ರೇಲ್ಗೆ ಭೇಟಿ ನೀಡಿದಾಗ ಸೈಬರ್ ಭದ್ರತೆಯನ್ನು ಭಾರತ ಮತ್ತು ಇಸ್ರೇಲ್ ನಾಯಕರು ಸಹಕಾರದ ಪ್ರಮುಖ ಕ್ಷೇತ್ರವೆಂದು ಗುರುತಿಸಿದ್ದರು. * COVID-19 ಬಿಕ್ಕಟ್ಟು ಪ್ರಪಂಚದಾದ್ಯಂತ ಕೆಲಸದ ಸಂಸ್ಕೃತಿಯನ್ನು ಬದಲಾಯಿಸುತ್ತಿರುವ ಹಿನ್ನಲೆ, ಸೈಬರ್ ಭದ್ರತೆ ಈ ಒಪ್ಪಂದ ಪ್ರಮುಖವಾಗಿದೆ. * ವಿಶ್ವವ್ಯಾಪಿ ಸೈಬರ್ ದಾಳಿಯಲ್ಲಿ ಭಾರತ 11 ನೇ ಸ್ಥಾನದಲ್ಲಿದೆ.