Job Description: ಕಿಂಗ್ಸ್ ವಿಲ್ : ಲೆಫ್ಟಿನೆಂಟ್ ಜೆ.ಜಿ. ಮೇಡ್ಲೈನ್ ಸ್ವೀಗಲ್ ಎಂಬ ಹೆಸರಿನ ಯುವತಿ ವಾಯುಪಡೆ ಶಾಲೆಯಲ್ಲಿ ತಮ್ಮ ತರಬೇತಿ ಪೂರ್ಣಗೊಳಿಸಿದ್ದು, ಶೀಘ್ರದಲ್ಲಿ ಅಮೆರಿಕದ ನೌಕಾಪಡೆಯಲ್ಲಿ ಫ್ಲೈಟ್ ಆಫೀಸರ್ ಆಗಿ ಸೇವೆ ಆರಂಭಿಸಲಿದ್ದು, ಇದೇ ಮೊದಲ ಬಾರಿಗೆ ಕಪ್ಪು ಜನಾಂಗದ ಮಹಿಳೆಯೊಬ್ಬರು ಯುದ್ಧ ವಿಮಾನದ ಪೈಲಟ್ ಆಗಿ ನೇಮಕಗೊಂಡಿದ್ದಾರೆ. * ಈ ಮೊದಲು 1974ರಲ್ಲಿ ರೋಸ್ಮೇರಿ ಮ್ಯಾರಿನರ್ ಟ್ಯಾಕ್ಟಿಕಲ್ ಫೈಟರ್ ಜೆಟ್ನಲ್ಲಿ ಹಾರಾಟ ನಡೆಸಿದ್ದರು. ಈ ಘಟನೆ ಆದ 45 ವರ್ಷಗಳ ಬಳಿಕ ಮತ್ತೆ ಈ ಸಾಧನೆಗೆ ಸ್ವೀಗಲ್ ನಿರ್ವಹಿಸಲಿದ್ದಾರೆ. ಈ ಮೂಲಕ ಕಪ್ಪು ಮಹಿಳೆಯ ನೇಮಕವನ್ನು ಅಮೆರಿಕದ ನೌಕಾಪಡೆಯು ಇತಿಹಾಸ ಸೃಷ್ಟಿ ಎಂದು ಬಣ್ಣಿಸಿದೆ. * ಇತ್ತೀಚಿಗೆ ಅಮೇರಿಕಾ ಪೊಲೀಸರಿಂದ ಕಪ್ಪು ಜನಾಂಗದ ವ್ಯಕ್ತಿಯಾದ ಜಾರ್ಜ್ ಫ್ಲಾಯ್ಡ ಹತ್ಯೆ ನಡೆದಿತ್ತು, ಇದರಿಂದಾಗಿ ಅಮೇರಿಕಾದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಘಟನೆಯ ನೆನಪು ಮಾಸುವ ಮುನ್ನವೇ ಅಮೆರಿಕದಲ್ಲಿ ರೋಸ್ಮೇರಿ ಮ್ಯಾರಿನರ್ ನೇಮಕವು ಆಶಾದಾಯಕ ಬೆಳವಣಿಗೆ ಎಂದೇ ವಿಶ್ಲೇಷಿಸಲಾಗುತ್ತಿದೆ.