Job Description: ವಿಶ್ವದ ಅತಿದೊಡ್ಡ ಕ್ಯಾಮೆರಾ ಟ್ರ್ಯಾಪಿಂಗ್ ಮೂಲಕ ವನ್ಯಜೀವಿ ಸಮೀಕ್ಷೆ ನಡೆಸಿದ ಅಖಿಲ ಭಾರತ ಹುಲಿ ಗಣತಿ 2018 ರ ನಾಲ್ಕನೇ ಆವೃತ್ತಿಯು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಗೆ ಸೇರ್ಪಡೆಗೊಂಡಿದೆ. 2006 ರಿಂದ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ, ಅಖಿಲ ಭಾರತ ಹುಲಿ ಗಣತಿಯನ್ನು ಭಾರತದಲ್ಲಿ ನಡೆಸಲಾಗುತ್ತಿದ್ದು, 2018 ರ ಗಣತಿಯು ನಾಲ್ಕನೇ ಆವೃತ್ತಿಯಾಗಿದೆ. ಮೊದಲ, ಎರಡನೆಯ ಮತ್ತು ಮೂರನೆಯ ಗಣತಿ ಕಾರ್ಯವು ಕ್ರಮವಾಗಿ 2006, 2010 ಮತ್ತು 2014 ವರ್ಷಗಳಲ್ಲಿ ನಡೆಸಲಾಗಿತ್ತು. * ಅಖಿಲ ಭಾರತ ಹುಲಿ ಅಂದಾಜಿನ ನಾಲ್ಕನೇ ಚಕ್ರದ ಫಲಿತಾಂಶವನ್ನು 2019 ರ ಜುಲೈ 29 ರಂದು ಜಾಗತಿಕ ಹುಲಿ ದಿನಾಚರಣೆಯಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದರು. * 2018 ರಲ್ಲಿ ನಡೆದ ಈ ಹುಲಿ ಗಣತಿಯು ವಿಶ್ವದ ಅತಿದೊಡ್ಡ ಕ್ಯಾಮೆರಾ ಟ್ರ್ಯಾಪಿಂಗ್ ಮೂಲಕ ನಡೆದ ವನ್ಯಜೀವಿ ಸಮೀಕ್ಷೆಗಾಗಿ ಗಿನ್ನೆಸ್ ವಿಶ್ವ ದಾಖಲೆಯಾ ಪುಟ ಸೇರಿದೆ.