Job Description: ಕಳೆದ ಜುಲೈ 3, 2020 ರಂದು ನಡೆಯಬೇಕಿದ್ದ 3 ನೇ ರಾಷ್ಟ್ರೀಯ ಲೋಕ ಅದಾಲತ್ ರದ್ದಾದ ಹಿನ್ನಲೆ, ಭಾರತದ ಮೊದಲ ರಾಜ್ಯ ಮಟ್ಟದ ‘ಇ-ಲೋಕ ಅದಾಲತ್’ ಅನ್ನು ಜುಲೈ 11, 2020 ರಂದು ಯಶಸ್ವಿಯಾಗಿ ನಡೆಸಲಾಯಿತು. ಛತ್ತೀಸಗಡದ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಪಿ.ಆರ್.ರಾಮಚಂದ್ರ ಮೆನನ್ ಅವರು ಬಿಲಾಸ್ಪುರ ಜಿಲ್ಲೆಯ ಹೈಕೋರ್ಟ್ನ ಕಾನ್ಫರೆನ್ಸ್ ಹಾಲ್ನಿಂದ ಭಾರತದ ಮೊದಲ ರಾಜ್ಯ ಮಟ್ಟದ ಇ-ಲೋಕ ಅದಾಲತ್ ಅನ್ನು ಉದ್ಘಾಟಿಸಿದರು. ವಿಡಿಯೋ-ಕಾನ್ಫರೆನ್ಸಿಂಗ್ ಮೂಲಕ ಇ-ಲೋಕ್ ಅದಾಲತ್ ನಡೆಸಲಾಯಿತು.