Job Description: ಬೆಂಗಳೂರು: ಕರ್ನಾಟಕದ ರಾಜ್ಯದ ಸ್ಥಳೀಯ ಕಲೆ, ಕುಶಲಕರ್ಮಿ ಹಾಗೂ ಕೈಮಗ್ಗ ವಲಯಗಳಿಗೆ ಉತ್ತೇಜನ ನೀಡುವ ಮೂಲಕ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ರಾಜ್ಯ ಸರ್ಕಾರದ MSME ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆಯೊಂದಿಗೆ ಪ್ರತಿಷ್ಠಿತ ಇ-ಕಾಮರ್ಸ್ ಸಂಸ್ಥೆಯಾದ ಫ್ಲಿಪ್ಕಾರ್ಟ್ ಒಪ್ಪಂದ ಮಾಡಿಕೊಂಡಿದೆ. * 'ಫ್ಲಿಪ್ಕಾರ್ಟ್ ಸಮರ್ಥ್' ಎಂಬ ಕಾರ್ಯಕ್ರಮದಡಿ ರಾಜ್ಯದ ಕುಶಲಕರ್ಮಿಗಳು, ನೇಕಾರರಿಗೆ ತಮ್ಮ ವಿಶಿಷ್ಟ ಉತ್ಪನ್ನಗಳನ್ನು ಪ್ರದರ್ಶಿಸಲು ಅನುವು ಮಾಡಿಕೊಡಲಿದೆ. * ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ 'ಕಾವೇರಿ' ಮತ್ತು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ 'ಪ್ರಿಯದರ್ಶಿನಿ' ಕೈಮಗ್ಗದ ಉತ್ಪನ್ನಗಳು ಈ ಕಾರ್ಯಕ್ರಮದ ವ್ಯಾಪ್ತಿಗೆ ಬರಲಿವೆ.